ಆಲೂರು: ಸರ್ಕಾರ ಬಡ ರೋಗಿಗಳಿಗೆಂದು ಕೋಟಿ ಕೋಟಿ ಹಣ ಖರ್ಚು ಮಾಡಿ ಹೈ ಕ್ವಾಲಿಟಿ ಸರ್ಕಾರಿ ಆಸ್ಪತ್ರೆಗಳನ್ನು ನಿರ್ಮಾಣ ಮಾಡುತ್ತಿದ್ರೆ, ವೈದ್ಯರು ಮಾತ್ರ ಯಾವುದೇ ಮಾಹಿತಿ ನೀಡದೆ ತಮ್ಮಿಷ್ಟಕ್ಕೆ ರಜೆ ಹಾಕಿಕೊಂಡು ಕರ್ತವ್ಯಕ್ಕೆ ಬಾರದೆ ರೋಗಿಗಳು ಪರದಾಡುವಂತೆ ಮಾಡುತ್ತಿದ್ದಾರೆ. ವೈದ್ಯರ ಈ ನಿರ್ಲಕ್ಷ್ಯದಿಂದ ಕೆಲ ರೋಗಿಗಳು ಗಂಟೆಗಟ್ಟಲೇ ಕಾದು ಕಾದು ಸುಸ್ತಾಗಿ ಆಸ್ಪತ್ರೆಯ ಬೋರ್ಡ್ ನೋಡಿಕೊಂಡು ಮನೆಗೆ ಹಿಂದಿರುಗುತ್ತಿದ್ದಾರೆ.
ಆಲೂರು ತಾಲೂಕಿನ ಕೆ. ಹೊಸಕೋಟೆ ಹೋಬಳಿಯಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಲಕ್ಷಾಂತರ ರೂ.ಗಳ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿಕೊಟ್ಟರು ಯಾವುದೇ ಪ್ರಯೋಜನವಿಲ್ಲವೆಂದು ಸಾರ್ವಜನಿಕರು ಹಾಗೂ ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಡಾಕ್ಟರ್ ಇಲ್ಲದ ಕಾರಣ ರೋಗಿಗಳಿಗೆ ನರಕ ಯಾತನೆಯಾಗಿದೆ. ಆಡಳಿತಾಧಿಕಾರಿಗಳು, ಜನಪ್ರತಿನಿಧಿಗಳು ಇದ್ದೂ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆ ಹೊಸ ಕೋಟೆ ಗ್ರಾಮದ ಧನಂಜಯ್ ಮಾತನಾಡಿ ನಮ್ಮ ಗ್ರಾಮದಲ್ಲಿ ನೂರಾರು ವರ್ಷಗಳಿಂದ ಸರ್ಕಾರಿ ಆಸ್ಪತ್ರೆ ಇದ್ದು, ಹೋಬಳಿಯಲ್ಲಿ ಹೆಚ್ಚಿನದಾಗಿ ರೈತಾಪಿ ಜನ ಹಾಗೂ ಕೂಲಿ ಕಾರ್ಮಿಕರು ಇದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿಕೊಳ್ಳಲು ಹಣವಿಲ್ಲದೆ, ಅವರಿಗೆ ಸರ್ಕಾರಿ ಆಸ್ಪತ್ರೆಯೇ ಗತಿಯಾಗಿದೆ. ಆದರೆ ಇತ್ತೀಚೆಗೆ ವೈದ್ಯರು ಸರಿಯಾದ ಸಮಯಕ್ಕೆ ಬಾರದೆ ರೋಗಿಗಳಿಗೆ ತೊಂದರೆಯಾಗುತ್ತಿದೆ, ಈಗಿರುವ ವೈದ್ಯೆ ವಿದ್ಯಾಶ್ರೀ ಕರ್ತವ್ಯಕ್ಕೆ ಸರಿಯಾದ ಸಮಯಕ್ಕೆ ಬರವುದಿಲ್ಲ, ಬಂದರು ರೋಗಿಗಳನ್ನು ಮುಟ್ಟಿ ನೋಡುವುದಿಲ್ಲ, ರೋಗಿಗಳನ್ನು. ವಯಸ್ಸಾದವರನ್ನು ಏಕವಚನದಲ್ಲಿ ಹೋಗೋ, ಬಾರೋ ಎಂದು ಮಾತನಾಡಿಸುತ್ತಾರೆ, ಈ ಹಿಂದೆ ಇದ್ದ ವೈದ್ಯರು ತುಂಬಾ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದ್ದರು ಆದರೆ ಈಗಿರುವ ವೈದ್ಯೆ ಆಸ್ಪತ್ರೆಗೆ ಬಂದರೆ ಜನಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಆಸ್ಪತ್ರೆಯಲ್ಲಿರುವ ಕಂಪೌಂಡರ್‌ಗಳನ್ನು ಬಿಟ್ಟು ರೋಗಿಗಳನ್ನು ನೋಡಿಸುತ್ತಾರೆ, ಕೆಲವು ಖಾಯಿಲೆಗೆ ಇಲ್ಲಿ ಔಷಧಿಯೇ ಇಲ್ಲಾ. ಇದರಿಂದ ಇಲ್ಲಿರುವ ಜನರ ಕಷ್ಟ ಹೇಳತೀರದಾಗಿದ್ದು ಖಾಸಗಿ ಆಸ್ಪತ್ರೆ ಇಲ್ಲದಿದ್ದರೆ ಎಲ್ಲರೂ ಸಾಯಬೇಕಿತ್ತು ಎಂದು ತಾಲೂಕು ಆಡಳಿತಕ್ಕೆ ಜನಪ್ರತಿನಿಧಿಗಳಿಗೆ ಹಾಗೂ ಸರ್ಕಾರಿ ವೈದ್ಯರಿಗೆ ಛೀಮಾರಿ ಹಾಕುತ್ತಿದ್ದಾರೆ.
ಕೆ.ಹೊಸಕೋಟೆ ಗ್ರಾಮದ ಜೀವನ್ ಮಾತಾನಾಡಿ, ಚಿಕೆತ್ಸೆಗಾಗಿ ಬಂದ ರೋಗಿಗಳೆಲ್ಲ ವೈದ್ಯರಿಲ್ಲದೆ ಚಿಕೆತ್ಸೆ ದೊರೆಯದೆ ಪರದಾಡುತ್ತಿದ್ದು ಡಾಕ್ಟರ್ ಗಳನ್ನು ಕಾದು ಕಾದು ಕೊನೆಗೆ ಪ್ರತಿಭಟನೆಗೆ ಮುಂದಾಗಿದ್ದಾರೆ. ಗ್ರಾಮದಲ್ಲಿ ಅರೋಗ್ಯ ಕೇಂದ್ರವಿದ್ದು ವೈದ್ಯರು ಯಾವುದೇ ಮಾಹಿತಿ ನೀಡದೆ ಏಕಾಏಕಿ ರಜೆ ಹಾಕಿದ್ದಾರೆ. ಇದರ ಮಾಹಿತಿ ತಿಳಿಯದ ನೂರಾರು ರೋಗಿಗಳು, ಗರ್ಭಿಣಿ, ಮಹಿಳೆಯರು ಆಸ್ಪತ್ರೆಗೆ ಆಗಮಿಸಿ ವೈದ್ಯರಿಗಾಗಿ ಕಾದು ಕುಳಿತರೆ ತಮ್ಮ ಪ್ರಾಣ ಹೋಗುತ್ತದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈಗಿರುವ ವೈದ್ಯೆ ವಿದ್ಯಾಶ್ರೀ ಕರ್ತವ್ಯಕ್ಕೆ ಬೆಳಗ್ಗೆ ಹನ್ನೆರಡು ಗಂಟೆಯಾದರು ಬರುವುದಿಲ್ಲ. ಹನ್ನೆರೆಡು ಗಂಟೆ ಮೇಲೆ ಬಂದು ಮೂರು ಗಂಟೆಗೆ ಮನೆಗೆ ಹೋಗುತ್ತಾರೆ. ಇದರಿಂದ ಸಂಜೆ ಮೇಲೆ ಬರುವಂತ ರೋಗಿಗಳು, ಏಮರ್ಜನ್ಸಿ ಎಂದು ಬಂದ ಗರ್ಭಿಣಿ ಸ್ತ್ರೀಯರಿಗೆ, ವೃದ್ಧರಿಗೆ ತುಂಬಾ ತೊಂದರೆಯಾಗುತ್ತಿದೆ. ಮತ್ತು ಅವರು ಉಳಿದುಕೊಳ್ಳಲು ಕ್ವಾಟ್ರಾಸ್ ವ್ಯವಸ್ಥೆ ಮಾಡಿಕೊಡುತ್ತೆವೆ ಎಂದರೆ ಅದು ಸರಿಯಿಲ್ಲ, ಇದು ಸರಿ ಇಲ್ಲವೆಂದು ಇಲ್ಲ ಸಲ್ಲದ ನೆಪ ಹೇಳುತ್ತಾರೆ. ಮೊದಲೇ ನಮ್ಮ ಭಾಗದಲ್ಲಿ ಕಾಡಾನೇ ಸಮಸ್ಯೆ ಹೆಚ್ಚಾಗಿದ್ದು, ತಿರುಗಾಡದ ಪರಿಸ್ಥಿತಿ ಉಂಟಾಗಿದೆ. ಹೀಗೆ ಇರುವಾಗ ಇದ್ದ ಈ ಒಂದು ಆಸ್ಪತ್ರೆ ಅವ್ಯವಸ್ಥೆಯಿಂದ ಕೂಡಿದೆ. ನಾವು ಏನು ಮಾಡಬೇಕೇಂಬುದೇ ತಿಳಿಯುತ್ತಿಲ್ಲ. ಇನ್ನೂ ಗರ್ಭಿಣಿಯರ ಪಾಡು ದೇವರೇ ಬಲ್ಲ.
ಡಾ. ವಿದ್ಯಾಶ್ರೀ ನಮ್ಮ ಆರೋಗ್ಯ ಕೇಂದ್ರಕ್ಕೆ ಬಂದು ಒಂದು ವರ್ಷವಾದರೂ ಇದುವರೆಗೂ ಒಂದು ಹೆರಿಗೆ ಮಾಡಿಸಿಲ್ಲ. ಕೇಳಿದರೆ ಇಲ್ಲಿ ಆಗುವುದಿಲ್ಲವೆಂದು ಹಾಸನಕ್ಕೆ ಕಳಿಸುತ್ತಾರೆ. ನರ್ಸ್‌ಗಳನ್ನು ಕೇಳಿದರೆ ಅವರ ಕೆಲಸದಲ್ಲಿ ಅವರು ಬ್ಯುಸಿಯಾಗಿರುತ್ತಾರೆ. ಒಂದೇ ಇಲ್ಲಿ ಬೇರೆ ವೈದ್ಯರನ್ನು ನೇಮಕ ಮಾಡಿ ಇಲ್ಲದಿದ್ದರೆ ಆಸ್ಪತ್ರೆಗೆ ಬೀಗ ಹಾಕಿ ಆಸ್ಪತ್ರೆ ಮುಂಭಾಗ ಕುಳಿತು ಉಗ್ರ ಹೋರಾಟ ಮಾಡುತ್ತೇವೆ ಎಂದು ಸಾರ್ವಜನಿಕರು ಎಚ್ಚರಿಸಿದರು.