ಬೇಲೂರು: ನನ್ನ ಮೇಲೆ ಮಾಡಿರುವ ಸುಳ್ಳು ಆರೋಪ ಸಾಬೀತು ಮಾಡಲು ವಿಫಲರಾಗಿರುವ ಪ್ರಕಾಶ ಅವರ ತಂಡದ ಮೇಲೆ ಕಾನೂನು ಹೋರಾಟ ಮಾಡಲು ಸಿದ್ದನಾಗಿದ್ದೇನೆ ಎಂದು ಸವಿತಾ ಸಮಾಜದ ಹಾಲಿ ತಾಲೂಕು ಅಧ್ಯಕ್ಷ ನರಸಿಂಹಸ್ವಾಮಿ ತಿಳಿಸಿದರು.
ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಸವಿತಾ ಸಮಾಜದ ಬೇಲೂರು ತಾಲೂಕು ಅಧ್ಯಕ್ಷನೆಂದು ಹೇಳಿಕೊಂಡು ನನ್ನ ಮೇಲೆ ಪ್ರಕಾಶ ತಂಡ ಸುಳ್ಳು ಆರೋಪ ಮಾಡಿ ಠಾಣೆಗೆ ದೂರು ದಾಖಲಿಸಿದ್ದರು. ಇವರಿಗೆ ನಾನು ಪತ್ರಿಕಾಗೋಷ್ಟಿಯ ಮೂಲಕ ಆರೋಪ ಸಾಭೀತು ಮಾಡಲು 48 ಗಂಟೆ ಗಡುವು ನೀಡಲಾಗಿತ್ತು. ಆದರೆ ಇವರು ದಾಖಲೆ ನೀಡಲು ವಿಫಲರಾಗಿದ್ದಾರೆ 2016ರಲ್ಲಿ ನಡೆದ ಚುನಾವಣೆಯಲ್ಲಿ ನಾನು ಬೇಲೂರು ತಾಲೂಕು ಅಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಬಗ್ಗೆ ನನ್ನ ಬಳಿ ದಾಖಲೆಗಳಿವೆ.
2021ರ ನಂತರ ಅವಧಿ ಮುಗಿದ ಮೇಲೆ 2ನೇ ಬಾರಿಗೆ ಮುಂದುವರೆಯಲು ಕಾನೂನಾತ್ಮಕವಾಗಿ ನನಗೆ ಕರ್ನಾಟಕ ರಾಜ್ಯ ಸವಿತಾ ಸಮಾಜ ಅವಕಾಶ ಮಾಡಿ ಕೊಟ್ಟಿದೆ. ಅದರಂತೆ ರಾಜ್ಯಾಧ್ಯಕ್ಷ ಸಂಪತ್ ಕುಮಾರ್ ಆದೇಶ ಪತ್ರ ನೀಡಿದ್ದಾರೆ. ಇನ್ನು ನನಗೆ ಬೇಲೂರು ಉಸ್ತುವಾರಿಯನ್ನು ವಹಿಸಿದ್ದಾರೆ. ಆದರೆ ವಿಷಯ ಗೊತ್ತಿಲ್ಲದೆ, ಸಮಾಜದಲ್ಲಿ ನಡೆಯುವ ಸಭೆಗೂ ಭಾಗವಹಿಸದೆ ಕೋಟೆ ಪ್ರಕಾಶ ಆರೋಪ ಮಾಡುತ್ತಿರುವುದು ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ, ಇನ್ನೂ ನರಸಿಂಹ ಸ್ವಾಮಿಯವರು, ನಾನೇ ತಾಲೂಕು ಅದ್ಯಕ್ಷ ಎಂದು ಸುಳ್ಳು ಹೇಳಿಕೊಂಡು ಸಮಾಜದಲ್ಲಿ ಬಿಂಬಿಸಿಕೊಳ್ಳುತ್ತಿದ್ದಾರೆ.
ಸಮಾಜದ ಅಭಿವೃದ್ದಿಗೆ ಅಗೌರವಾಗಿ ನಡೆದುಕೊಳ್ಳುತ್ತಿದ್ದಾರೆ. ಸಮಾಜದ ಹಣ ದುರುಪಯೋಗ ಮಾಡಿಕೊಂಡಿದ್ದು ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಪ್ರಕಾಶ ನೇತೃತ್ವದಲ್ಲಿ ಸವಿತಾ ಸಮಾಜದ ಕೆಲ ಪದಾಧಿಕಾರಿಗಳು ಪೋಲೀಸ್ ಠಾಣೆಗೆ ದೂರು ನೀಡಿದ್ದರು. ನನ್ನ ಮೇಲಿನ ಆರೋಪಗಳಿಗೆ ನೀವು 48 ಗಂಟೆಯೊಳಗೆ ದಾಖಲೆ ನೀಡದ ಕೋಟೆ ಪ್ರಕಾಶ್, ಬಿ.ಆರ್. ಜಯರಾಂ, ಬಿ.ಆರ್ ಗೋಪಾಲ, ಬಿ.ಎನ್. ಪುಷ್ಪಲತಾ, ಬಿ.ಆರ್. ಆನಂದ ಹಾಗೂ ಮೋಹನ ಇವರ ಮೇಲೆ ಕಾನೂನು ಹೋರಾಟ ನಡೆಸುತ್ತೇನೆ ಎಂದು ಎಚ್ಚರಿಸಿದರು.
ಸವಿತಾ ಸಮಾಜದ ತಾಲೂಕು ಗೌರವ ಅಧ್ಯಕ್ಷ ಬಿ.ಯು. ಚಂದ್ರು, ಉಪಾಧ್ಯಕ್ಷ ಮೋಹನ, ನಿರ್ದೇಶಕ ವಿಷ್ಣುಪ್ರಸಾದ, ಸದಸ್ಯ ಕುಮಾರ, ಅನೀಲ ಇದ್ದರು.