ಹಾಸನ: 7ನೇ ವೇತನ ಆಯೋಗ ಜಾರಿ, ನೂತನ ಪಿಂಚಣಿ ಪದ್ಧತಿ (ಎನ್‌ಪಿಎಸ್) ರದ್ದು ಮಾಡಬೇಕೆಂದು ಒತ್ತಾಯಿಸಿ ಸರ್ಕಾರಿ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಅಧೀನದಲ್ಲಿರುವ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಸರ್ಕಾರಿ ಸೇವೆಗಳು ಬಹುತೇಕ ಬಂದ್ ಆಗಿದ್ದವು. ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ 65 ಇಲಾಖೆಗಳಲ್ಲಿ ಬುಧವಾರ ಸೇವೆ ಲಭ್ಯವಾಗಿಲ್ಲ.
ನೌಕರರು ಸ್ವಯಂ ಪ್ರೇರಿತ ರಜೆ ಮಾಡಿದ್ದು, ಮುಷ್ಕರಕ್ಕೆ ಬೆಂಬಲ ನೀಡಿದ್ದರು. ಜಿಲ್ಲಾಧಿಕಾರಿ ಕಚೇರಿ, ತಹಶೀಲ್ದಾರ್ ಕಚೇರಿ, ತಾಲೂಕು ಕಚೇರಿ ಸೇರಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸೇವೆ ಇರಲಿಲ್ಲ. ಶಾಲಾ ಮಕ್ಕಳಲ್ಲಿ ಆರಂಭದಲ್ಲಿ ಗೊಂದಲವಿತ್ತು, ಜಿಲ್ಲೆಯ 25 ಸಾವಿರಕ್ಕೂ ಹೆಚ್ಚು ನೌಕರರು ಪಾಲ್ಗೊಂಡಿದ್ದರು. ಇಂದು ಕೂಡ ಸರ್ಕಾರಿ ನೌಕರರೆಲ್ಲ ಸಂಘದಲ್ಲಿ ಸಭೆ ಸೇರಿ ಮುಷ್ಕರಕ್ಕೆ ಬೆಂಬಲ ಸೂಚಿಸುವ ಕುರಿತು ನಿರ್ಧಾರಗಳನ್ನು ಕೈಗೊಂಡಿದ್ದರೆ.
ನಂತರ ಮುಖ್ಯಮಂತ್ರಿ ಹಾಗೂ ಸಂಘದ ರಾಜಘಟಕದ ಅಧ್ಯಕ್ಷರ ನಡುವೆ ನಡೆದಂತಹ ಮಾತುಕತೆಯಲ್ಲಿ ಸರ್ಕಾರ ನೌಕರರಿಗೆ 17% ಸಂಬಳ ಏರಿಕೆ ಮಾಡಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಮುಷ್ಕರವನ್ನು ಹಿಂಪಡೆಯಲಾಗಿದೆ.