ಸಕಲೇಶಪುರ: ತಾಲೂಕು ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಹಳ್ಳಿ ಗ್ರಾಮದಲ್ಲಿ ಥಾಳನೇರಿ ಗುಡ್ಡದ ಸುತ್ತಮುತ್ತಲಿನ ಪ್ರಕೃತಿ ವೀಕ್ಷಣಾ ಟವರ್ ಪ್ರದೇಶ ಸೇರಿದಂತೆ, ರೈತರಿಗೆ ಸೇರಿದ 10 ಎಕರೆ ಹೆಚ್ಚಿನ ವಿಸ್ತೀರ್ಣದ ಕಾಫಿ ತೋಟಗಳು ಭಾನುವಾರ ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.
ಪ್ರವಾಸಿ ತಾಣವಾದ ಗುಡ್ಡದ ಮೇಲೆ ಬೆಳೆದ ಹುಲ್ಲಿಗೆ ತಗಲಿದ ಬೆಂಕಿಯು, ಗಾಳಿಯ ರಬಸಕ್ಕೆ ಅಕ್ಕ ಪಕ್ಕದಲ್ಲಿದ್ದ ರೈತರ ಕಾಫಿ ತೋಟಗಳಿಗೆ ಹತ್ತಿಕೊಂಡು ಬೆಳೆದು ಫಸಲಿಗೆ ಬಂದಿದ್ದ ಕಾಫಿ ಗಿಡಗಳು ಸೇರಿದಂತೆ ತೋಟದಲ್ಲಿದ್ದ ಇತರ ಮರಗಳು ಬೆಂಕಿಗೆ ಆಹುತಿ ಆಗಿದೆ. ಗ್ರಾಮಸ್ಥರು ಸೇರಿ ಬೆಂಕಿ ನಂದಿಸುವಲ್ಲಿ ಹರಸಾಹಸ ಪಡಬೇಕಾಯಿತು.
ಪ್ರಕೃತಿ ವೀಕ್ಷಣಾ ಟವರ್, ಸರ್ಕಾರಿ ಗೋಮಾಳು ಸೇರಿದಂತೆ ಗ್ರಾಮದ ರೈತರಾದ ಹೆಚ್.ಎಸ್ ತಮ್ಮೇಗೌಡ, ಎಚ್.ಡಿ.ವಸಂತ್ ಹಾದಿಮನೆ, ಪಾರ್ವತಮ್ಮ, ಮಲ್ಲೇಶ, ಕೊಣಬನಹಳ್ಳಿ ಪ್ರಕಾಶ್, ಚೀರಿ ಸುರೇಶ ಅವರರಿಗೆ ಸೇರಿದ 10 ಎಕರೆಗೂ ಹೆಚ್ಚು ಕಾಫಿ ತೋಟ ಬೆಂಕಿಗಾಹುತಿಯಾಗಿದೆ.
ಪ್ರಕೃತಿ ಮಾತೆಯ ಕೋಪವೋ ಅಥವಾ ಮೋಜು ಮಸ್ತಿಗಾಗಿ ಬಂದು ಮಾಡಿದ ಎಡವಟ್ಟಿಗೂ ರೈತರು ಕಷ್ಟ ಪಟ್ಟು ಬೆಳೆದ ಬೆಳೆಯು ಬೆಂಕಿಗೆ ಆಹುತಿಯಾಗಿ ರೈತರು ಕಣ್ಣೀರು ಹಾಕುವಂತಾಗಿದೆ.