ಚನ್ನರಾಯಪಟ್ಟಣ: ಸರ್ಕಾ ರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ಪದವಿ ಪೂರ್ವ ವಸತಿ ಕಾಲೇಜು ಉದ್ಘಾಟನೆ ಮಾಡಿ ಮಾತನಾಡಿದ ಶಾಸಕ ಸಿ. ಎನ್. ಬಾಲಕೃಷ್ಣ ಚನ್ನರಾಯಪಟ್ಟಣ ನಗರ ವ್ಯಾಪ್ತಿಯಲ್ಲಿ ಮಾಡಿದ್ದರೆ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ ಎಂದು ನಗರದ ಹೊರ ಭಾಗದಲ್ಲಿ ಮಾಡಲಾಗಿದೆ ಎಂದರು.
ಎಲ್ಲಾ ಸಮಸ್ಯೆಗಳಿಗೆ ಶಿಕ್ಷಣವೇ ಪರಿಹಾರ ಎಂದು ಡಾ. ಬಿ. ಆರ್. ಅಂಬೇಡ್ಕರ್ ಹೇಳಿದ್ದಾರೆ. ಅವರ ಆಶಯದಂತೆ ದೇವೇಗೌಡರು ಸಿಎಂ ಆದಾಗ ಮೊರಾರ್ಜಿ ಶಾಲೆ ಪ್ರಾರಂಭಿಸಿದರು. ಅಂದಿನ ಶಾಸಕರಾದ ಹೆಚ್ ಸಿ ಶ್ರೀಕಂಠಯ್ಯ ಕಟ್ಟಡ ಪೂಜೆ ಮಾಡಿದ್ದರು ಎಂದು ಹೇಳಿದರು. ಮೊರಾರ್ಜಿ ವಸತಿ ಶಾಲೆಯ ಕಟ್ಟಡ ರಿಪೇರಿಯನ್ನು ಸಿಎಸ್ ಆರ್ ಅನುದಾನದಲ್ಲಿ ೧೫ ಲಕ್ಷ ವೆಚ್ಚದಲ್ಲಿ ಕೆಲಸ ಮಾಡಲಾಗಿದೆ. ನುಗ್ಗೆಹಳ್ಳಿ ವಸತಿ ಶಾಲೆಯ ಕಟ್ಟಡವನ್ನು ಪೂರ್ಣಗೊಳಿಸುವಲ್ಲಿ ನುಗ್ಗೇಹಳ್ಳಿ ಗುತ್ತಿಗೆದಾರ ಪ್ರಸನ್ನ ತಡಮಾಡಿದ್ದಾರೆ ಎಂದರು. ಹಿರೀಸಾವೆ ಬಾಗೂರು ಓಬಳಾಪುರ ಗ್ರಾಮಗಳಲ್ಲಿ ಐದು ಎಕರೆ ಜಮೀನನ್ನು ಮೀಸಲಿಟ್ಟು ಮೂರು ಮೊರಾರ್ಜಿ ಶಾಲೆ ಮಾಡಲಾಗುತ್ತದೆ ಎಂದರು.
ಬಿಸಿಎಂ ವಸತಿ ನಿಲಯದಲ್ಲಿ ೧೬೦೦ ವಿದ್ಯಾರ್ಥಿಗಳು, ಸಮಾಜ ಕಲ್ಯಾಣದಲ್ಲಿ ೮೦೦ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವೆಂಕಟೇಶ್ವರ ಲೇಔಟ್ ನ ಬಾಲಕಿಯರ ವಸತಿ ಶಾಲೆ ಹತ್ತಿರ ಅಲ್ಪಸಂಖ್ಯಾತ ಹಾಸ್ಟೆಲ್ ನಿವೇಶನ ನೀಡುವಂತೆ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದನೆ ನೀಡಿ, ಸ್ಪಂದನೆ ಮಾಡಿದ ಶಾಸಕರು ವೆಂಕಟೇಶ್ವರ ಲೇ ಔಟ್ ನಲ್ಲಿ ನಿವೇಶನ ನೀಡುವುದಾಗಿ ಭರವಸೆ ನೀಡಿದರು.
ಚನ್ನರಾಯಪಟ್ಟಣ ನಗರದ ಉರ್ದು ಶಾಲೆಗೆ ಎಂಟು ಕೊಠಡಿ ನಿರ್ಮಾಣ ಮಾಡಲಾಗಿದೆ. ಹಾಸನ ಜಿಲ್ಲೆಗೆ ೧೨ ಕೊಠಡಿ ಮಂಜೂರಾಗಿದ್ದು, ಎಂಟು ಕೊಠಡಿಗಳನ್ನು ಚನ್ನರಾಯಪಟ್ಟಣಕ್ಕೆ ಮಂಜೂರು ಮಾಡಿಸಿಕೊಳ್ಳುವಲ್ಲಿ ಸಫಲನಾಗಿದ್ದೇನೆ, ಶಿಕ್ಷಣ ಸಚಿವ ನಾಗೇಶ್ ಚನ್ನರಾಯಪಟ್ಟಣ ತಾಲೂಕಿಗೆ ೨೫ ಕೊಠಡಿ ನೀಡಿದ್ದಾರೆ ಎಂದರು. ಚನ್ನರಾಯಪಟ್ಟಣ ನಗರದಲ್ಲಿ ಶಾಲಾ ಕೊಠಡಿ ಸಮಸ್ಯೆ ಇಲ್ಲದಂತೆ ನೋಡಿಕೊಳ್ಳಲಾಗಿದೆ. ಶಿಕ್ಷಕರು ಕೊರತೆ ಇದೆ ಅದನ್ನು ನೀಗಿಸಲು ಸರ್ಕಾರ ಮುಂದಾಗಬೇಕು. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶಾಲೆ ತೆರೆದು ಗುಣಮಟ್ಟದ ಶಿಕ್ಷಣ ನೀಡಬೇಕು ಎನ್ನುವ ಉದ್ದೇಶ ನಮ್ಮದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ರೇಖಾ ಅನಿಲ್ , ಉಪಾಧ್ಯಕ್ಷೆ ಲಕ್ಷ್ಮೀ, ಸದಸ್ಯರಾದ ಸುರೇಶ, ರಾಣಿ, ಯೋಗೇಶ್, ಇಲಾಖೆ ಜಿಲ್ಲಾಧಿಕಾರಿ ಪ್ರದೀಪ ಸಿಂಹ, ಪ್ರಾಂಶುಪಾಲರಾದ ಸುನಿತಾ, ಬಿಸಿಎಂ ಅಧಿಕಾರಿ ಮಂಜುನಾಥ್, ಟಿಎಪಿಎಂಎಸ್ ಅಧ್ಯಕ್ಷ ರಮೇಶ್, ಎ ಇ ಇ ವಿಜಯ್, ಉಪನ್ಯಾಸಕ ರತ್ನಾಕರ್, ಕಟ್ಟಡ ಗುತ್ತಿಗೆದಾರ ಸಂತೋಷ್, ವಾರ್ಡನ್ ಯೋಗೇಶ್, ನುಗ್ಗೇಹಳ್ಳಿ ವಸತಿ ಶಾಲೆಯ ಪ್ರಾಂಶುಪಾಲರಾದ ಸಾಂಜಿತಾ, ಉಪನ್ಯಾಸಕರುಗಳಾದ ಧರ್ಮೇಗೌಡ, ಜಯಶೀಲ ಹಾಜರಿದ್ದರು.