ಆಲೂರು: ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಣತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತಾ ವಜ್ರೇಶ್ ಮತದಾನ ಮಾಡದೆ “ಪ್ರಜಾ ಪ್ರಭುತ್ವ” ವ್ಯವಸ್ಥೆಗೆ ಅಪಮಾನ ಮಾಡಿದ್ದಾರೆ ಎಂದು ಕಣತೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮೋಹನ್ ಕುಮಾರ್ ತೊಗರನಹಳ್ಳಿ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಣತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕವಿತಾ ವಜ್ರೇಶ್ ಅವರು, ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ತೊಗರನಹಳ್ಳಿ ಗ್ರಾಮದ ಮತಗಟ್ಟೆ-35ರಲ್ಲಿ ಮತದಾನ ಮಾಡದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಮಾನ ಮಾಡಿದ್ದಾರೆ. ಜನಪ್ರತಿನಿಧಿಯಾಗಿ ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ಇವರು ಮತದಾನ ಮಾಡುವ ಮೂಲಕ ಜನಸಾಮಾನ್ಯರಿಗೆ ಮಾದರಿಯಾಗಿ ಸಾಮಾನ್ಯ ಜನರಿಗೆ ಮತದಾನದ ಬಗ್ಗೆ ಜಾಗೃತಿ-ಅರಿವು ಮೂಡಿಸಬೇಕಾಗಿತ್ತು, ಆದರೇ ಇವರೇ ಮತದಾನ ಮಾಡದಿರುವುದು ‘ಪ್ರಜಾತಂತ್ರ’ ವ್ಯವಸ್ಥೆಗೆ ಅಪಮಾನ. ಇವರ ಈ ನಡೆಯನ್ನು ಯಾವುದೇ ಸಾಮಾನ್ಯ ಜನರು ಸಹ ಒಪ್ಪುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಣತೂರು ಗ್ರಾ.ಪಂ ಮಾಜಿ ಸದಸ್ಯ ಮೋಹನ್ ಕುಮಾರ್, ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮಲ್ಲಿಕಾರ್ಜುನ, ಗ್ರಾಮಸ್ಥರುಗಳಾದ ಶಾಮಣ್ಣ, ಬಸವರಾಜು, ಸುರೇಶ್ ಇದ್ದರು.