ಹಾಸನ: ನಗರದ ೨೨ನೇ ವಾರ್ಡ್ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲು ವಾರ್ಡ್‌ಗೆ ಆಗಮಿಸಿದ ಶಾಸಕರಿಗೆ ನಿವಾಸಿಗಳು ಪಟಾಕಿ ಹಚ್ಚಿ ಅದ್ದೂರಿಯಾಗಿ ಸ್ವಾಗತಿಸಿದರು.
ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿ ನಂತರ ಮಾತನಾಡಿದ ಶಾಸಕ ಪ್ರೀತಂ ಗೌಡ ನಾನು ನುಡಿದಂತೆ ನಡೆದುಕೊಂಡಿದ್ದೇನೆ. ಸುಮಾರು ವರ್ಷಗಳಿಂದ ಆಗದ ಕೆಲಸವನ್ನು ನಾನು ಮಾಡಿದ್ದೇನೆ. ಹಕ್ಕುಪತ್ರವನ್ನು ನಿಮ್ಮ ಮನೆ ಬಾಗಿಲಿಗೆ ಬಂದು ತಲುಪಿಸಿದ್ದೇನೆ. ವಾರ್ಡ್ ಅಲ್ಲಿ ೨೫೦ ನಿವಾಸಿಗಳಿಗೆ ಹಕ್ಕುಪತ್ರ ಇಂದು ವಿತರಣೆ ಮಾಡಿದ್ದು ಮುಂದಿನ ದಿವಸಗಳಲ್ಲಿ ಇನ್ನುಳಿದ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸುವುದಾಗಿ ತಿಳಿಸಿದರು.
ಸುಮಾರು ವರ್ಷಗಳಿಂದ ಕಾಯುತ್ತಿದ್ದ ನಿವಾಸಿಗಳಿಗೆ ಇಂದು ಅಧಿಕೃತವಾಗಿ ಹಕ್ಕುಪತ್ರ ದೊರೆತಿದ್ದು, ನಿವಾಸಿಗಳೆಲ್ಲರೂ ಶಾಸಕರಿಗೆ ಧನ್ಯವಾದಗಳನ್ನು ತಿಳಿಸಿ ಮುಂಬರುವ ಚುನಾವಣೆಯಲ್ಲಿ ಶಾಸಕರನ್ನು ಬೆಂಬಲಿಸುವುದಾಗಿ ತಿಳಿಸಿದರು. ನಗರಸಭೆ ಅಧ್ಯಕ್ಷ ಮೋಹನ .ಆರ್, ಮುಖಂಡರಾದ ಮಣಿಕಂಠ, ಅರುಣ, ರೋಷನ್ ಜಮೀರ್, ವಾಸಿಕ್, ಅಪ್ಪಿ ಹಾಗೂ ನೂರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.