ಹಾಸನ: ಬೂವನಹಳ್ಳಿ ಕ್ರಾಸ್ ಬಳಿಯ ಗಾಂಧಿಪರ ನಿವಾಸಿ ಕುಮಾರ್ ಎಂಬುವವರು ಕಳೆದ ಮಾ. 28ರಂದು ರಾತ್ರಿ ಸಮಯದಲ್ಲಿ ಕಾಣೆಯಾಗಿರುವ ಬಗ್ಗೆ ವರದಿಯಾಗಿದೆ.
ಕಾಣೆಯಾದ ವ್ಯಕ್ತಿ ಕುಮಾರ್ ಬಾರ್ ಬೆಂಡಿಂಗ್ ಕೆಲಸ ನಡೆಸುತ್ತಿದ್ದು ಈತನಿಗೆ ಕುಡಿಯುವ ಚಟವಿದ್ದು ಮಾ. 28ರಂದು ಕುಡಿದು ಗಲಾಟೆ ಮಾಡಿ ಮನೆಯಿಂದ ಹೊರ ಹೋದವನು ಹಿಂದಿರುಗಿ ಬಾರದೆ ಕಾಣೆಯಾಗಿರವ ಬಗ್ಗೆ ಪತ್ನಿ ದೂರು ದಾಖಲಿಸಿದ್ದಾರೆ.
ಕುಮಾರ್ 5.8 ಅಡಿ ಎತ್ತರವಿದ್ದು, ಗೋದಿಬಣ್ಣ, ಗಿಣಿಮೂಗು, ಕೋಲು ಮುಖ, ಕಪ್ಪು/ಬಿಳಿ ಕೂದಲು ಹೊಂದಿದ್ದಾನೆ. ಕನ್ನಡ ಮಾತನಾಡುತ್ತಾನೆ. ಹಳದಿ ಬಣ್ಣದ ಟೀ ಶರ್ಟ್ ಮತ್ತು ಪಟ್ಟೆ ಪಟ್ಟೆ ಚಡ್ಡಿ ಧರಿಸಿದ್ದರು. ಬಲಗೈಯಲ್ಲಿ ಹಳೆಯ ಗಾಯದ ಗುರುತು ಇದೆ.
ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಾಣೆಯಾದ ವ್ಯಕ್ತಿ ಕಂಡು ಬಂದಲ್ಲಿ 08172268967, 9480804708, 9480804747 ಸಂಪರ್ಕಿಸಲು ಕೋರಿದೆ.