ಹಾಸನ: ಕೃಷಿ ಹಾಗೂ ಇತರ ಉಪಕಸುಬುಗಳಲ್ಲಿ ಯುವಕರು ವಿಮುಕರಾಗುತ್ತಿರುವ ನಡುವೆ ರೈತ ಎನ್ನುವ ಕಾರಣಕ್ಕೆ ಹುಡುಗಿ ಸಿಗದಿರುವ ಸಮಸ್ಯೆ ಹೆಚ್ಚುತ್ತಿದ್ದು, ಇದನ್ನು ಮನಗಂಡು “ಕೃಷಿ ಸ್ವಯಂವರ” ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಓಡನಹಳ್ಳಿ ನ್ಯಾನೋ ಫುಡ್ ಪಾರ್ಕ್ ಮುಖ್ಯಸ್ಥ ಅಶೋಕ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಗಳಲ್ಲಿ ಕೆಲಸ ಸಿಗದೇ ವಿದ್ಯಾವಂತ ಯುವಕರು ತಮ್ಮ ಊರಿನಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಹಲವು ಉದಾಹರಣೆಗಳಿವೆ. ಆದರೆ ಇವರಿಗೆ ರೈತರು ಎಂಬ ಕಾರಣಕ್ಕೆ ವಧು ಸಿಗದೆ, ಮದುವೆ ಆಗದೆ ಇರುವ ಯುವಕರು ಸಾಕಷ್ಟು ಮಂದಿ ಇದ್ದು, ಇವರಿಗೆ ಕೃಷಿ ಸ್ವಯಂವರ ಕಾರ್ಯಕ್ರಮದ ಮೂಲಕ ವಧುಗಳನ್ನು ಹುಡುಕಿ ಕೊಡುವ ವಿಶೇಷ ಪ್ರಯತ್ನ ಇದಾಗಿದೆ ಎಂದರು. ನಮ್ಮ ಈ ಪ್ರಯತ್ನಕ್ಕೆ ಕೈ ಜೋಡಿಸಿ ನೂರು ರೂ. ಶುಲ್ಕದೊಂದಿಗೆ ಯುವ ರೈತರು ತಮ್ಮ ಮಾಹಿತಿಯನ್ನು ಒದಗಿಸಿದರೆ ಸೂಕ್ತ ವಧುವನ್ನು ಹುಡುಕಿ ಕೊಡುವುದಾಗಿ ತಿಳಿಸಿದರು. ಯುವ ರೈತರು ಹೆಚ್ಚಿನ ಮಾಹಿತಿಗಾಗಿ ೯೯೬೪೯೭೯೮೯೯ ಸಂಪರ್ಕಿಸಲು ಕೋರಿದ್ದಾರೆ.