ಸಕಲೇಶಪುರ: ತಾಲೂಕಿನ ಬೈಕೆರೆ ಸಮೀಪ ಅಪರಿಚಿತ ವಾಹನ ಡಿಕ್ಕಿ ಹೊಡೆದು ಕಬ್ಬೆಕ್ಕೊಂದು ಸ್ಥಳದಲ್ಲೆ ಮೃತಪಟ್ಟಿದೆ. ನೋಡಲಿಕ್ಕೆ ಚಿರತೆ ಮರಿ ರೀತಿಯಲ್ಲಿ ಕಾಣುವುದರಿಂದ ಸ್ಥಳೀಯರು ಚಿರತೆ ಮರಿ ಸಾವಿಗೀಡಾಗಿದೆ ಎಂದು ಗೊಂದಲಕ್ಕೆ ಈಡಾಗಿದ್ದಾರೆ. ಅರಣ್ಯ ಇಲಾಖೆಯವರು ಸ್ಥಳಕ್ಕೆ ಬಂದು ಪರಶೀಲನೆ ನಡೆಸಿದ್ದಾರೆ. ಪದೇ ಪದೇ ರಾಷ್ಟ್ರೀಯ ಹೆದ್ದಾರಿ ೭೫ ರ ಸಕಲೇಶಪುರ ಮಂಗಳೂರು ಮಾರ್ಗವಾಗಿ ಸಂಚರಿಸುವ ವಾಹನಗಳಿಗೆ ಸಿಲುಕಿ ಕಾಡು ಪ್ರಾಣಿಗಳ ಸಾವು ಹೆಚ್ಚುತ್ತಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಕಾಡುಪ್ರಾಣಿಗಳ ಸಾವನ್ನು ತಡೆಯಬೇಕು ಎಂದು ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.
ಅಪರಿಚಿತ ವಾಹನ ಡಿಕ್ಕಿ: ಕಬ್ಬೆಕ್ಕು ಸ್ಥಳದಲ್ಲೆ ಸಾವು

Photo Credit :
Bharath
MANY DROPS MAKE AN OCEAN
Support NewsKarnataka's quality independent journalism with a small contribution.