ಹಾಸನ: ಜಿಲ್ಲೆಯಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಸರ್ಕಾರಿ ಜಾಗವನ್ನು ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸುವಂತೆ ಡಿ.ದೇವರಾಜ್ ಅರಸು ಟ್ರಕ್ ಟರ್ಮಿನಲ್‌ನ ಲಿಮಿಟೆಡ್ ಅದ್ಯಕ್ಷರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಡಿ.ಎಲ್.ವೀರಯ್ಯ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿಂದು ಟ್ರಕ್ ಟರ್ಮಿ ನಲ್ ನಿರ್ಮಾಣಕ್ಕೆ ಗುರುತಿಸಿಕೆ ಹಾಗೂ ಹಂಚಿಕೆ ಬಗ್ಗೆ ಆದಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಟ್ರಕ್ ಟರ್ಮಿನಲ್ ನಿರ್ಮಾಣದಿಂದ ರಸ್ತೆ ಅಪಘಾತ, ಟ್ರಾಫಿಕ್ ಜಾಮ್, ಹಾಗೂ ವಾಯು ಮಾಲಿನ್ಯ ತಡಗಟ್ಟಬಹುದಾಗಿದೆ ಎಂದರಲ್ಲದೆ ನಗರ ಅಭಿವೃದಿಯಾಗಲಿದೆ, ಸ್ಥಳೀಯರಿಗೆ ಉದ್ಯೋಗ ಅವಕಾಶ ದೊರೆಯಲಿದೆ ಎಂದರು.
ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ 30-40 ಎಕರೆ ಸರ್ಕಾರಿ ಜಾಗ ಅವಶ್ಯವಿದೆ. ಇದರಲ್ಲಿ ಪೇಟ್ರೋಲ್ ಬಂಕ್, ಸರ್ವಿಸ್ ಪೋಲಿಸ್ ಚೌಕಿ, ಶೌಚಾಲಯ, ವ್ಯಾಯಮ ಕೊಠಡಿ, ಹೋಟೆಲ್ ವೇ-ಬ್ರೀಡ್ಜ್, ಎಟಿಎಂ ಕೇಂದ್ರ, 5-6 ದಾಸ್ತುನು ಮಳಿಗೆಗಳು ಡಾರ್ಮೇಂಟ್ರಿ ಮತ್ತಿತರ ಮೂಲಭೂತ ಸೌಲಭ್ಯಗಳನ್ನು ನಿರ್ಮಿಸುವ ಉದ್ದೇಶವಿದೆ ಎಂದು ವೀರಯ್ಯ ತಿಳಿಸಿದರು.
ರಾಜ್ಯದಲ್ಲಿ ಈಗಾಗಲೇ 8 ಜಿಲ್ಲೆಗಳಲ್ಲಿ ಟ್ರಕ್ ಟರ್ಮಿನಲ್ ಅಗಿದೆ, ಅದೇ ರೀತಿ ಹಾಸನ ಜಿಲ್ಲೆಯಲ್ಲಿಯೂ ಟ್ರಕ್ ಟರ್ಮಿನಲ್ ನಿರ್ಮಿಸಿದಲ್ಲಿ ಜಿಲ್ಲೆಗೆ ಬೇರೆ ಬೇರೆ ರಾಜ್ಯದಿಂದ ಬರುವ ಲಾರಿ ಚಾಲಕರು, ಕ್ಲೀನರ್‌ಗಳಿಗೆ ಸಹಕಾರಿಯಾಗಲಿದೆ ಎಂದರು. ಜಿಲ್ಲೆಯಲ್ಲಿ ಸಂಚಾರಿಸುವ ಲಾರಿ ಚಾಲಕರು ಹಾಗೂ ಕ್ಲಿನರ್ ಗಳು ಕೆಲ ಸಮಯ ವಿಶ್ರಾಂತಿ ಪಡೆದು ಮುಂದೆ ಸಾಗಲು ನೆರವಾಗುವಂತೆ ಜಿಲ್ಲೆಯಲ್ಲಿ ರಾಷ್ಟೀಯ ಹೆದ್ದಾರಿ ಹಾದು ಹೋಗಿರುವ ತಾಲೂಕುಗಳಲ್ಲಿ ಕೇಂದ್ರ ಸರ್ಕಾರದ ಪಿಎಂ ಗತಿ-ಶಕ್ತಿ ಯೋಜನೆಯಡಿ ವಿಶ್ರಾಂತಿ ನಿಲ್ದಾಣ ನಿರ್ಮಿಸಿ ಮೂಲಭೂತ ಸೌಕರ್ಯ ಒದಗಿಸಲು ಸೂಕ್ತ ಸ್ಥಳ ಗುರುತಿಸುವಂತೆ ತಹಶೀಲ್ದಾರ್ ಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಅರ್ಚನಾ ಅವರು ಮಾತನಾಡಿ, ಶೀಘ್ರವಾಗಿ ಸರ್ಕಾರಿ ಜಾಗವನ್ನು ಗುರುತಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಗರ ಸಭೆ ಅಧ್ಯಕ್ಷ ಮೋಹನ, ಉಪ ವಿಭಾಗಾಧಿಕಾರಿ ಕೃಪಾಲಿನಿ, ಪೌರಾಯುಕ್ತರಾದ ಪರಮೇಶ್ವರಪ್ಪ, ಪ್ರಾದೇಶಿಕ ಸಾರಿಗೆ ಅಧಿಕಾರಿ ಮಲ್ಲೆಶ, ಕೆಐಎಡಿಬಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶ್ರೀನಿವಾಸ ಜೋಶಿ, ತಹಸೀಲ್ದಾರರು ಹಾಗೂ ಮತ್ತಿತರರು ಹಾಜರಿದ್ದರು.