ಬೇಲೂರು: ತಾಲೂಕಿನ ಬಿಕ್ಕೋಡು ಹೋಬಳಿಯ ಬಂದಿಹಳ್ಳಿ ಗ್ರಾಮದಲ್ಲಿ ಅದೃಷ್ಟವಶಾತ್ ಚಿರತೆ ದಾಳಿಯಿಂದ ತಪ್ಪಿಸಿಕೊಂಡು ಬಚಾವ್ ಆದ ರೈತ ಕೇಶವ ಶೆಟ್ಟಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಇಂದು ಬೆಳಿಗ್ಗೆ ೮ ಘಂಟೆಯ ಹೊತ್ತಿಗೆ ಮನೆಯ ಹತ್ತಿರ ಇರುವ ನಮ್ಮ ತೋಟಕ್ಕೆ ಕೆಲಸದ ನಿಮಿತ್ತ ಹೋಗುತ್ತಿರುವಾಗ ದಾರಿ ಮದ್ಯೆ ಹಠತ್ತನೆ ನನ್ನ ಮೇಲೆ ಚಿರತೆ ದಾಳಿ ಮಾಡಲು ಮುಂದಾಯಿತು. ನಾನು ಭಯದಿಂದ ಕೂಗಾಡಿ, ಚಿರತೆಯನ್ನು ಎಳೆದು ತಳ್ಳಾಡಿದ ನಂತರ ಅಲ್ಲಿಂದ ಕಾಲ್ಕಿತ್ತ ಚಿರತೆ ಕಣ್ಮರೆಯಾಯಿತು.
ತಕ್ಷಣ ಅರಣ್ಯಾಧಿಕಾರಿಗಳ ಗಮನಕ್ಕೆ ತಂದೆ. ಕೆಲವು ಹೊತ್ತಿನಲ್ಲಿಯೇ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳ ಪರಿಶೀಲಿಸಿ ನನ್ನನ್ನು ಹತ್ತಿರದ ಆಸ್ಪತ್ರೆ ಕರೆದುಕೊಂಡು ಹೋಗಿ ಚಿಕಿತ್ಸೆಯನ್ನು ನೀಡಿರುತ್ತಾರೆ ಹಾಗೂ ಚಿರತೆಯನ್ನು ಸೆರೆ ಹಿಡಿಯುವುದಾಗಿ ಹೇಳಿರುತ್ತಾರೆ.
ಇಲ್ಲಿಯ ಗ್ರಾಮಸ್ಥರು, ರೈತರು ಈಗಾಗಲೇ ಆನೆಯ ಉಪಟಳದಿಂದ ಬೆಸೆತ್ತು ಕಂಗಾಲಾಗಿರುವ ಸಂದರ್ಭದಲ್ಲಿ ಈಗ ಚಿರತೆ ಕಂಡು ಬಂದಿದ್ದು ನಮಗೆ ಇನ್ನಷ್ಟು ಭಯದ ವಾತಾವರಣದಲ್ಲಿ ಬದುಕುವ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಆದುದರಿಂದ ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣವೇ ಇದರ ಗಮನ ಹರಿಸಿ ಚಿರತೆಯನ್ನು ಸೆರೆ ಹಿಡಿಯಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ ಎಂದರು.