ಹಾಸನ: ನಗರದ ಅರಳೀಕಟ್ಟೆ ರಸ್ತೆ ಬಳಿ ಇರುವ ತವರು ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಆವರಣದಲ್ಲಿ ಹಿಮೋಫಿಲಿಯಾ ಸೊಸೈಟಿ ಹಾಸನ ಚಾಪ್ಟರ್ ವತಿಯಿಂದ ಶನಿವಾರದಂದು ಹಮ್ಮಿಕೊಳ್ಳಲಾಗಿದ್ದ ಹಿಮೋಫಿಲಿಕ್ಸ್ ಫಿಸಿಯೋಥೆರಪಿ ಶಿಬಿರವನ್ನು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಲಾಯಿತು.
ನಮ್ಮ ಸೊಸೈಟಿ ಹಿಮೋಫಿಲಿಯಾ ರೋಗಿಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಇನ್ನು ಅನೇಕ ಪ್ರಾಜೆಕ್ಟ್ ಗಳು ಬರುತ್ತಿದ್ದು, ಹಾಸನ ಜಿಲ್ಲೆಯಲ್ಲಿ 54 ಕುಟುಂಬದ ಸದಸ್ಯರು ಹಿಮೋಫಿಲಿಯಾ ರೋಗದಿಂದ ಬಳಲುತ್ತಿದ್ದಾರೆ. ರಕ್ತಸ್ರಾವವಾದಾಗ, ಯಾವುದೇ ವೇಳೆ ಫ್ಯಾಕ್ಟರ್ ಇಂಜೆಕ್ಷನ್‌ಗಳು ಜೀವ ಉಳಿಸಿಕೊಳ್ಳಲು ಹಾಗೂ ಅಂಗವಿಕಲತೆಯಾಗದಂತೆ ತಡೆಗಟ್ಟಲು ಬಹಳ ಅವಶ್ಯಕವಾಗಿರುತ್ತದೆ.
ಹಿಮೋಫಿಲಿಯಾ ರೋಗವು ಅನುವಂಶಿಯತೆಯಿಂದ ಬರುವ ಕಾಯಿಲೆ. ಹಾಸನ ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ಫ್ಯಾಕ್ಟರ್ ಇಂಜೆಕ್ಷನ್‌ಗಳು ವರ್ಷದ ಎಲ್ಲಾ ಸಮಯಗಳಲ್ಲಿ ಸಿಗುವುದಿಲ್ಲದಿರುವುದರಿಂದ ಅನೇಕ ಹಿಮೋಫಿಲಿಯಾ ರೋಗಿಗಳ ಸಾವು-ನೋವು ಸಂಭವಿಸುತ್ತಿದೆ ಎಂದರು. ಹಿಮೋಫಿಲಿಯಾ ರೋಗಿಗಳಿಗೆ ಸೂಕ್ತವಾದ ಫ್ಯಾಕ್ಟರ್ ಇಂಜೆಕ್ಷನ್ ಗಳನ್ನು ದೊರಕುವಂತಾಗಬೇಕು. ಈ ವೇಳೆ ಪ್ರವೀಣ ಸಾವನಪ್ಪಿರುವುದು ದುಃಖಕರವಾದ ವಿಚಾರವಾಗಿದೆ ಎಂದು ಇಂಟಸ್ ಫೌಂಡೇಶನ್ ಬೆಂಗಳೂರಿನ ಕುದ್ಸಿಯಾ ಬೇಗಂ ಹಾಗೂ ಹಿರಿಯ ಪತ್ರಕರ್ತರಾದ ವೆಂಕಟೇಶ್ ಆತಂಕವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಫಿಸಿಯೋಥೆರಪಿಸ್ಟ್ ಡಾ. ನಿರ್ಣಯ್ಯ ಗೌಡ, ಹಿಮೋಫಿಲಿಯಾ ಸೊಸೈಟಿ ಹಾಸನ್ ಚಾಪ್ಟರ್ ಅಧ್ಯಕ್ಷರಾದ ಹರೀಶ, ಕಾರ್ಯದರ್ಶಿ ಹೆಚ್.ಕೆ. ಪಾಲಾಕ್ಷ, ಖಜಾಂಚಿ ನಾರಾಯಣ ರಾವ್, ಉಪಾಧ್ಯಕ್ಷ ಫಾರತ್ ಅಪ್ಸಾ ಬೇಗಂ, ಜಂಟಿ ಕಾರ್ಯದರ್ಶಿ ಪ್ರವಿಣ, ಶೇಷಮ್ಮ ಇತರರು ಉಪಸ್ಥಿತರಿದ್ದರು.