ಸಕಲೇಶಪುರ: ತಾಲೂಕಿನ ಬೆಳಗೋಡು ಹೋಬಳಿ ಹೆಬ್ಬನಹಳ್ಳಿ ಗ್ರಾಮ ತುಂಬಾ ದೊಡ್ಡ ಗ್ರಾಮವಾಗಿರುತ್ತದೆ ಆದರೆ ಹೆಚ್ ಕೆ ಕುಮಾರಸ್ವಾಮಿ ಸಕಲೇಶಪುರದಲ್ಲಿ ಹಲವು ಬಾರಿ ಶಾಸಕರಾಗಿದ್ದಾರೆ ಆದರೆ ತಾಲೂಕಿನಲ್ಲಿ ದಲಿತ ಕುಟುಂಬಗಳು ಎಲ್ಲಿ ವಾಸ ಮಾಡುತ್ತಿದ್ದಾರೆ ಎನ್ನುವುದೇ ಅವರಿಗೆ ಸರಿಯಾಗಿ ತಿಳಿದಿರುವುದಿಲ್ಲ ಹೆಬ್ಬನ ಹಳ್ಳಿ (ಮಾಸ್ತಿಗಯ್ಯ) ಗ್ರಾಮಕ್ಕೆ ಮೂಲಭೂತ ಸೌಕರ್ಯಗಳಿಲ್ಲದೆ ಸಾರ್ವಜನಿಕರ ಪರದಾಟ ಹೆಚ್ಚಾಗಿದೆ. ಬೇರೆ ಕಡೆ ಎಲ್ಲಾ ರಸ್ತೆಗಳಿಗೆ ಸಿಮೆಂಟ್ ರಸ್ತೆ, ಜಲ್ಲಿ ರಸ್ತೆ, ಮುಂತಾದ ರಸ್ತೆಗಳನ್ನು ಮಾಡಿ ಅಭಿವೃದ್ಧಿ ಮಾಡಿದರೆ ಇಲ್ಲಿ ಮಾತ್ರ ಮಣ್ಣು ರಸ್ತೆ ಶಾಶ್ವತವಾಗಿದೆ. ಈ ರಸ್ತೆಯಲ್ಲಿ ಕನಿಷ್ಠ ಗುಂಡಿಗಳನ್ನು ಮುಚ್ಚುವ ಕೆಲಸಕ್ಕೂ ಗಮನಕೊಡದ ಶಾಸಕರಾಗಿದ್ದಾರೆ. ಈ ಗ್ರಾಮಕ್ಕೆ ಸರಿಯಾಗಿ ಕುಡಿಯಲು ನೀರು ಇಲ್ಲ, ಸಿಮೆಂಟ್ ರಸ್ತೆ ವ್ಯವಸ್ಥೆ ಇಲ್ಲ, ಬಾಕ್ಸ್ ಚರಂಡಿ ವ್ಯವಸ್ಥೆ ಇಲ್ಲ, ಬೀದಿ ದೀಪಗಳ ವ್ಯವಸ್ಥೆ ಸರಿಯಾಗಿ ಇಲ್ಲ, ಇಂಥ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿರುವ ಹೆಬ್ಬನಹಳ್ಳಿ (ಮಾಸ್ತಿಗಯ್ಯ ಕಾಲೋನಿ) ಗ್ರಾಮಸ್ಥರು ಈ ಬಾರಿ ಚುನಾವಣೆಯಲ್ಲಿ ಶಾಸಕ ಕುಮಾರಸ್ವಾಮಿಗೆ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಸಿದ್ದಾರೆ.
ಈ ಗ್ರಾಮದಲ್ಲಿ ಸುಮಾರು ೪೦ ಮನೆಗಳು ಇದ್ದು, ಇದುವರೆಗೂ ಯಾವೊಬ್ಬ ಅಧಿಕಾರಿಗಳು ಕೂಡ ಇತ್ತ ಕಡೇ ಗಮನ ಹರಿಸದೆ ಹಾಗೂ ಯಾವೊಬ್ಬ ಜನಪ್ರತಿನಿಧಿಗಳಾಗಲಿ ಇತ್ತ ಕಡೆ ಮುಖ ಮಾಡದಿರುವುದು ಎಷ್ಟರ ಮಟ್ಟಿಗೆ ಸರಿ ಅನ್ನಿಸಿದೆ. ಗ್ರಾಮ ಪಂಚಾಯತ್ ಸದಸ್ಯರು ಹಾಗೂ ತಾಲೂಕು ಪಂಚಾಯಿತಿ ಸದಸ್ಯರು, ಜಿಲ್ಲಾ ಪಂಚಾಯತ್ ಸದಸ್ಯರು, ಎಲ್ಲಾ ಜನಪ್ರತಿನಿಧಿಗಳು ಚುನಾವಣೆ ಬಂದಾಗ ಮಾತ್ರ ಈ ಗ್ರಾಮಕ್ಕೆ ತೆರಳಿ ಆಶ್ವಾಸನೆ ನೀಡಿ ಹೋಗುತ್ತಾರೆ. ಚುನಾವಣೆಯಲ್ಲಿ ಗೆದ್ದ ನಂತರ ನಾವು ಬ್ಯುಸಿ, ನಾವು ಬ್ಯುಸಿ ಎಂದು ಹಣ ಮಾಡುವ ಕಡೆಗೆ ಮುಂದಾಗುತ್ತಾರೆ ಆದರೆ ಈ ಗ್ರಾಮದ ಅಭಿವೃದ್ಧಿ ಮಾತ್ರ ಶೂನ್ಯ ಆಗಿರುತ್ತದೆ.
ಹಲವಾರು ವರ್ಷಗಳಿಂದ ಈ ರಸ್ತೆಗೆ ದುರಸ್ತಿ ಕಾಣದ ಪರಿಸ್ಥಿತಿ ಎದುರಾಗಿದೆ ಈ ರಸ್ತೆಯ ಪಕ್ಕದಲ್ಲಿ ಕಾಡು ಬೆಳೆದುಕೊಂಡು ವಾಹನ ಸಂಚಾರ ಮಾಡಲು ತೊಂದರೆ ಉಂಟಾಗಿದೆ. ಈ ವ್ಯಾಪ್ತಿಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸೌಜನ್ಯಕ್ಕಾದರು ರಸ್ತೆ ಬದಿಯಲ್ಲಿರುವ ಕಾಡನ್ನು ತೆರವುಗೊಳಿಸಿ ರಸ್ತೆಯಲ್ಲಿ ಸುರಕ್ಷಿತವಾಗಿ ಸಂಚಾರ ಮಾಡಲು ಅನುಕೂಲ ಮಾಡಿಕೊಡಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಅಕ್ಕಪಕ್ಕ ದಿಂದ ರಸ್ತೆಗೆ ಬರುವ ಪ್ರಾಣಿಗಳು ಸಾರ್ವಜನಿಕರಿಗೆ ಗೊತ್ತಾಗುವುದಿಲ್ಲ ಅಂದರೆ ಈ ರಸ್ತೆ ಅಕ್ಕ ಪಕ್ಕ ಕಾಡು ಬೆಳೆದು ನಿಂತಿದೆ ಅಭಿವೃದ್ಧಿ ಕಾಣದ ಪರಿಸ್ಥಿತಿಯಾಗಿದೆ. ಅದೇನೆ ಆಗಲಿ ಇನ್ನೂ ಕೆಲ ದಿನಗಳಲ್ಲಿ ಈ ಗ್ರಾಮಕ್ಕೆ ಮೂಲಭೂತ ಸೌಕರ್ಯ ಹಾಗೂ ಉತ್ತಮ ರಸ್ತೆ ನಿರ್ಮಾಣ ಮಾಡದೇ ಇದ್ದಲ್ಲಿ ಗ್ರಾಮಸ್ಥರೆಲ್ಲರೂ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.