ಹಾಸನ: ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ನೀಡುವ ಇಸ್ರೇಲ್ ಹಸುಗಳನ್ನು ತರುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಓಡನಹಳ್ಳಿ ನ್ಯಾನೋ ಫುಡ್ ಪಾರ್ಕ್ ಮುಖ್ಯಸ್ಥ ಅಶೋಕ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಫೆಬ್ರವರಿ 19-2022ರಂದು ಇಸ್ರೇಲ್ ಪ್ರವಾಸದ ವೇಳೆ ಒಂದು ಹಳ್ಳಿಯಲ್ಲಿ ಹೈನುಗಾರಿಕೆ ಮಾಡುವ ವ್ಯಕ್ತಿ 300 ಹಸುಗಳನ್ನು ಸಾಕುವ ಮೂಲಕ ನಿರೀಕ್ಷೆಗೂ ಮೀರಿ ಲಾಭ ಗಳಿಸುತ್ತಿರುವ ಬಗ್ಗೆ ಮಾಹಿತಿ ಪಡೆದಿದ್ದೇನೆ.
ಇಸ್ರೇಲ್ ಒಂದು ಹಸು ದಿನವೊಂದಕ್ಕೆ 50ರಿಂದ 80 ಲೀಟರ್ ಹಾಲನ್ನು ನೀಡುತ್ತದೆ ಹಾಗೂ ಹಾಲಿನ ಗುಣಮಟ್ಟ ಬಹಳ ಉತ್ಕೃಷ್ಟವಾಗಿದೆ. ಆದ್ದರಿಂದ ಈ ಹಸುಗಳನ್ನು ನಮ್ಮ ರೈತರಿಗೆ ಒದಗಿಸಿದಲ್ಲಿ ಹೈನುಗಾರಿಕೆ ಲಾಭದಾಯಕವಾಗಲಿದೆ ಎಂದರು. ಇಲ್ಲಿನ ರೈತರಿಗೆ ಹೈನುಗಾರಿಕೆಯಲ್ಲಿ ಲಾಭ ತಂದು ಕೊಡುವ ಇಸ್ರೇಲ್ ಹಸುಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲ ತಿಂಗಳಲ್ಲಿ ನೂರು ಹಸುಗಳನ್ನು ಇಸ್ರೇಲ್‌ನಿಂದ ತರಲು ನಿರ್ಧಾರ ಮಾಡಲಾಗಿದೆ ಎಂದು ಅಶೋಕ ತಿಳಿಸಿದರು.