ಅರಸೀಕೆರೆ: ಬೆಳೆ ರಕ್ಷಣೆಗೆಂದು ಸಿಂಪಡಿಸಿದ್ದ ಕೀಟನಾಶಕ ಔಷಧಿಯುಕ್ತ ಹಿರೇಕಾಯಿ ಬಳ್ಳಿಯನ್ನು ಸೇವಿಸಿದ ಹತ್ತಾರು ಮೇಕೆಗಳು ಮೃತಪಟ್ಟಿರುವ ಘಟನೆ ಕಸಬಾ ಹೋಬಳಿ ಶಂಕರನಳ್ಳಿ ತಾಂಡ್ಯದಲ್ಲಿ ಸಂಭವಿಸಿದೆ.
ಮೃತಪಟ್ಟ ಮೇಕೆಗಳು ತಾಂಡ್ಯದ ವಾಸಿ ಮರುಳನಾಯ್ಕನಿಗೆ ಸೇರಿದ್ದು, ಎಂದಿನಂತೆ ತನ್ನ ಮೇಕೆ ಮರಿಯನ್ನು ಮೇಯಲು ಬಿಟ್ಟಿದ್ದ ಸಂದರ್ಭದಲ್ಲಿ ಏಕಾಏಕಿ ಒಂದರಿಂದ ಒಂದು ತೀವ್ರ ಅಸ್ವಸ್ಥಗೊಂಡು ಕಣ್ಣೆದುರಿಗೆ ಮೃತ ಪಡುತ್ತಿರುವುದನ್ನ ಕಂಡ ಮರುಳನಾಯ್ಕ ಕೂಡಲೇ ಪಶು ವೈದ್ಯರಿಗೆ ಸುದ್ದಿ ಮುಟ್ಟಿಸಿದ್ದರಿಂದ ಧಾವಿಸಿ ಬಂದ ವೈದ್ಯರ ತಂಡ ಅಸ್ವಸ್ಥಗೊಂಡಿದ್ದ ಮೇಕೆಗಳಿಗೆ ಚಿಕಿತ್ಸೆ ನೀಡಿದರು. ಈ ವೇಳೆಗಾಗಲೇ ೧೫ ಮೇಕೆ ಮರಿಗಳು ಸಾವನ್ನಪ್ಪಿದ್ದವು. ಉಳಿದ ಮರಿಗಳಿಗೆ ಚಿಕಿತ್ಸೆ ನೀಡಲಾಗಿದೆ.