ಹಾಸನ: ಹುಟ್ಟು ಅಂಗವಿಕಲರಾದ ಅರುಣ್ ಇತ್ತೀಚೆಗೆ ಅಪಘಾತಕ್ಕೆ ತುತ್ತಾಗಿ ತೀವ್ರ ಅಸ್ವಸ್ಥರಾಗಿದ್ದು ಶಸ್ತ್ರಚಿಕಿತ್ಸೆಗೆ ದಾನಿಗಳು ನೆರವು ನೀಡುವಂತೆ ಸಮಾಜ ಸೇವಕ ಆರ್ ಜಿ.ಗಿರೀಶ್ ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನ ಕಾರ್ಲೆ ಸತ್ತಿಗರಹಳ್ಳಿಯ ಗ್ರಾಮದವರಾದ ಅರುಣ್ ಕುಮಾರ್ ಅವರು ಅಂಧರಾಗಿದ್ದಾರೆ. ಈ ನಡುವೆಯೂ ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡಿದ್ದಾರೆ. ಜೀವನ ಸಾಗಿಸಲು ಲಿಫ್ಟ್ ನಿರ್ವಹಣೆ ಕೆಲಸ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಅಪಘಾತಕ್ಕೀಡಾಗಿ ತೀವ್ರ ಅಸ್ವಸ್ಥನಾಗಿದ್ದು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇವರ ತಂದೆ ತಾಯಿ ಕೂಲಿ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ. ಶಸ್ತ್ರಚಿಕಿತ್ಸೆಗೆ ಹಣದ ಸಹಾಯ ಬೇಕಿದ್ದು ದಾನಿಗಳಿಂದ ಸಹಾಯಕ್ಕೆ ಮನವಿ ಮಾಡಿದ್ದಾರೆ.
ಧನಸಹಾಯ ಮಾಡುವವರು ಕಾರ್ಲೆ ಶಾಖೆಯ ಕೆನರಾ ಬ್ಯಾಂಕ್ ಅಕೌಂಟ್ ನಂಬರ್ ಅರುಣ್ ಕುಮಾರ್: 4346108002303, IFSC:CNRB0004346,
ಹೆಚ್ಚಿನ ವಿವರಗಳಿಗೆ ಮೊ:9663011844ಗೆ ಸಂಪರ್ಕಿಸಬಹುದು. ಪತ್ರಿಕಾಗೋಷ್ಟಿಯಲ್ಲಿ ಅಂಗವಿಕಲ ಹಾಗೂ ಅಪಘಾತಕ್ಕೆ ತುತ್ತಾದ ಗಾಯಾಳು ಅರುಣ್ ಕುಮಾರ್, ಈತನ ಅಜ್ಜಿ ಇದ್ದರು.