ಆಲೂರು: ವಿದ್ಯುತ್ ವ್ಯತ್ಯಯದಿಂದ ರೈತರು ಕೆಇಬಿ ಕಚೇರಿಗೆ ಮುತ್ತಿಗೆ ಹಾಗೂ ಬೀಗ ಹಾಕಿಸಿ ಅಧಿಕಾರಿಗಳನ್ನು ಹೊರಗಡೆ ನಿಲ್ಲಿಸಿರುವ ಘಟನೆ ನಡೆದಿದೆ.
ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿದ್ದು ಇಂದು ಆಲೂರು ತಾಲೂಕಿನ ಕೆಇಬಿ ಕಚೇರಿ ಮುಂದೆ ಹೊಸೂರು ಗ್ರಾಮಸ್ಥರು ಮುತ್ತಿಗೆ ಹಾಕಿ ಕೆಇಬಿ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳನ್ನು ತರಾಟಗೆ ತೆಗೆದುಕೊಂಡರು.
ತಾಲೂಕಿನಲ್ಲಿ ದಿನನಿತ್ಯ ರೈತರು ಬಂದು ಕಚೇರಿ ಮುಂದೆ ತಮ್ಮ ಕಷ್ಟಗಳನ್ನು ಹೇಳಿಕೊಂಡರೂ ಅಧಿಕಾರಿಗಳು ಮಾತ್ರ ಕ್ಯಾರೇ ಅನ್ನದೇ ರೈತರಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸುತಿಲ್ಲ, ಹಾಗೂ ಕಳೆದ ಎಂಟು ದಿನಗಳಿಂದ ಕುಡಿಯಲು ನೀರಿಲ್ಲದೆ, ಅಡುಗೆ ಮಾಡಲು ನೀರಿಲ್ಲದೆ, ಕೆರೆಯ ನೀರನ್ನು ಕುಡಿಯುತ್ತಿದ್ದೇವೆ ಎಂದು ಮಾಧ್ಯಮದವರೊಂದಿಗೆ ತಮ್ಮ ಅಳಲನ್ನು ಹಂಚಿಕೊಂಡರು.
ಕಾರ್ಯಪಾಲಕ ಇಂಜಿನಿಯರ್ ನಿರಂಜನ್ ಹಾಗೂ ಜೀವನ್ ಅವರನ್ನು ವಜಾ ಮಾಡಿ ಇಲ್ಲದಿದ್ದರೆ ಕಛೇರಿ ಮುಂದೆ ಉಗ್ರಹೋರಾಟದ ಜೊತೆಗೆ ಉಪವಾಸ ಸತ್ಯಾಗ್ರಹ ಮಾಡುತ್ತೇವೆ.
ಹೊಸೂರು ಗ್ರಾಮ ಪಂಚಾಯಿತಿ ಸದಸ್ಯ ನಂದೀಶ್ ಮಾತನಾಡಿ, ನಮ್ಮ ಹೊಸೂರು ಗ್ರಾಮಸ್ಥರಿಗೆ ಒಂದೇ ಒಂದು ಟ್ರಾನ್ಸಾಫಾರ್ಮ್ ನ್ನು ನೀಡಿದ್ದು, ಅದನ್ನು ಏಕಾಏಕಿ ಯಾರಿಗೂ ಹೇಳದೆ ಕೇಳದೆ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿದ್ದಾರೆ ಇದರಿಂದ ಗ್ರಾಮದಲ್ಲಿ ಕುಡಿಯಲು ನೀರಿಲ್ಲದೆ ತುಂಬಾ ತೊಂದರೆಯಾಗಿದೆ ಹಾಗೂ ರಾತ್ರಿವೇಳೆ ವಿದ್ಯುತ್ ಇಲ್ಲದೆ ಮಕ್ಕಳು ಓದುವುದಕ್ಕೂ ತೊಂದರೆಯಾಗುತ್ತಿದೆ. ನಾವು ಕೆಇಬಿ ಅಧಿಕಾರಿಗಳಿಗೆ ಕರೆ ಮಾಡಿದರೆ ನಿರಂಜನ್ ದುರಂಕಾರದಿಂದ ಮಾತನಾಡುತ್ತಾರೆ ಇನ್ನೂ ಜೀವನ್ ಅವರನ್ನು ಕೇಳಿದರೆ ನನಗೂ ಅದಕ್ಕೂ ಸಂಬಂಧವಿಲ್ಲ. ನೀವು ಇಂಜಿನಿಯರ್ ನಿರಂಜನ್ ಅವರಿಗೆ ಮಾಡಿ ಎನ್ನುತ್ತಾರೆ. ಅವರಿಗೆ ಕರೆ ಮಾಡಿದರೆ ಫೋನ್ ರಿಸೀವ್ ಮಾಡುವುದಿಲ್ಲ. ನಾವು ಯಾರನ್ನು ಕೇಳಬೇಕು ಏನು ಮಾಡಬೇಕು ಎನ್ನುವುದೇ ತಿಳಿಯುತ್ತಿಲ್ಲ. ಶಾಸಕರ ಗಮನಕ್ಕೆ ಈ ವಿಷಯ ತಿಳಿಸಿ ಅವರು ಸಮಸ್ಯೆ ಬಗ್ಗೆ ಕರೆ ಮಾಡಿ ಅಧಿಕಾರಿಗಳಿಗೆ ಹೇಳಿದರು ಕೂಡ, ಇತ್ತಾ ಕಡೆ ಯಾರು ಬಂದು ಸುಳಿದಿಲ್ಲ. ಸಮಸ್ಯೆಯನ್ನು ಬಗೆಹರಿಸುತ್ತಿಲ್ಲ. ನಮಗೆ ನ್ಯಾಯ ಬೇಕು. ಇಲ್ಲದಿದ್ದರೆ ಇಂತಹ ಬೇಜವಾಬ್ದಾರಿತನದ ಅಧಿಕಾರಿಯನ್ನು ವಜಾಗೊಳಿಸಬೇಕೆಂದರು.
ಹೊಸೂರು ಗ್ರಾಮಸ್ಥ ಮಾತಾನಾಡಿ ನಮಗೆ ಬೆಳೆ ಬೆಳೆಯಲು ಒಂದೇ ಒಂದು ಟ್ರಾನ್ಸ್‌ಫಾರ್ಮ್‌ನ್ನು ಅಳವಡಿಸಿದ್ದು ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಸುತ್ತ-ಮುತ್ತಲು ಗ್ರಾಮದ ಜಮೀನಿನಲ್ಲಿ ಸುಮಾರು ೪೦ ಬೋರುವೆಲ್ ಗಳು ಇದ್ದು, ವಿದ್ಯುತ್ ಬಂದಾಗ ಎಲ್ಲರು ಅದನ್ನೇ ಅವಲಂಬಿಸಿದ್ದಾರೆ ಆದರೆ ಒಂದೇ ಬಾರಿ ಮೋಟಾರ್ ನ್ನು ಆನ್ ಮಾಡಿದಾಗ ಓವರ್ ಲೋಡ್‌ನಿಂದ ಟ್ರಾನ್ಸ್ಫಫಾರ್ಮ್ ಸುಟ್ಟು ಹೋಗುತ್ತಿದೆ. ಎಂದು ಮಾಧ್ಯಮದವರೊಂದಿಗೆ ರೈತರು ತಮ್ಮ ಅಳಲನ್ನು ತೋಡಿಕೊಂಡರು. ಈ ಸಂದರ್ಭದಲ್ಲಿ ಹೊಸೂರು ಗ್ರಾಮ ಪಂಚಾಯಿತಿ ಸದಸ್ಯ ನಂದೀಶ್, ಗುರು, ನಟೇಶ್, ಅನಿಲ್, ಗಣೇಶ್, ಮೂರ್ತಿ ಇದ್ದರು.