ಹಾಸನ: ಹಾಸನ ಉಪ ವಿಭಾಗ ಡಿವೈಎಸ್‌ಪಿ ಜಿ.ವಿ. ಉದಯ ಭಾಸ್ಕರ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಬೆಂಗಳೂರು ಸಿಐಡಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿ.ಎಸ್. ಶ್ರೀನಿವಾಸ ರಾಜ್ ಅವರನ್ನು ನಿಯೋಜನೆ ಮಾಡಿ ಆದೇಶ ಹೊರಡಿಸಲಾಗಿದೆ.
ಜಿ.ವಿ. ಉದಯ ಭಾಸ್ಕರ ಅವರನ್ನು ಮುಂದಿನ ಆದೇಶದವರೆಗೆ ಪ್ರಧಾನ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಲು ರಾಜ್ಯ ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಪ್ರವೀಣ ಸೂದ್ ಸೂಚಿಸಿದ್ದಾರೆ.
ಈ ಹಿಂದೆ ಚುನಾವಣೆ ಮುಗಿಯುವವರೆಗೆ ತಾತ್ಕಾಲಿಕ ವರ್ಗಾವಣೆ ಕೋರಿ ಉದಯ ಭಾಸ್ಕರ ಡಿಜಿಪಿ ಅವರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿಯೇ ಆದೇಶ ಹೊರ ಬಿದ್ದಿದ್ದು ಮಾಜಿ ಸಚಿವ ಹೆಚ್. ಡಿ. ರೇವಣ್ಣ ಅವರು ಸಹ ಉದಯ ಭಾಸ್ಕರ ವರ್ಗಾವಣೆ ಮಾಡುವಂತೆ ಒತ್ತಾಯಿಸಿದ್ದರು.