ಹಾಸನ: ನಗರದ ಎನ್‌ಆರ್ ಸರ್ಕಲ್ ಅನ್ನು ಅಭಿವೃದ್ಧಿಗೊಳಿಸಿ ಸುಂದರಗೊಳಿಸಲಾಗಿದೆ ಹಾಗೂ ಇಲ್ಲಿ ಪವರ್‌ಸ್ಟಾರ್ ದಿವಂಗತ ಪುನೀತ್‌ರಾಜ್‌ಕುಮಾರ್ ಅವರ ಪುತ್ಥಳಿಯನ್ನೂ ಕೂಡ ಸ್ಥಾಪಿಸಲಾಗಿದೆ. ಆದರೆ ಇಲ್ಲಿ ಕುಡುಕರು ಸದಾ ನಶೆ ಏರಿಸಿಕೊಂಡು ಮಿನಿ ಪಾರ್ಕಿನಲ್ಲಿ ವಾಸ್ತವ್ಯ ಹೂಡುತ್ತಾರೆ. ಅಲ್ಲದೆ ಪಾರ್ಕಿನ ಜಾಗದಲ್ಲೇ ಮೂತ್ರ ಮಾಡಿ ಸರ್ಕಲ್ ಅನ್ನು ಗಲೀಜು ಮಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ಮತ್ತು ಪೊಲೀಸ್ ಇಲಾಖೆಯವರು ತುರ್ತು ಗಮನಹರಿಸಿ, ಕುಡುಕರನ್ನು ಪಾರ್ಕಿನ ಒಳಗೆ ನಿರ್ಬಂಧ ಹೇರಬೇಕು ಎಂದು ನಾಗರೀಕರು ಒತ್ತಾಯಿಸಿದ್ದಾರೆ.
ಎನ್‌ಆರ್ ಸರ್ಕಲ್‌ನಲ್ಲಿ ಕುಡುಕರ ಕಾಟ

Photo Credit :
Bharath
MANY DROPS MAKE AN OCEAN
Support NewsKarnataka's quality independent journalism with a small contribution.