News Karnataka
Saturday, June 10 2023
ಸಿಟಿಜನ್ ಕಾರ್ನರ್

ಸಂವಿಧಾನ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ

Somasekhar spoke on the birth anniversary of Constitution architect Dr. BR Ambedkar at Holenarasipur town taluk office.
Photo Credit : Bharath

ಹೊಳೆನರಸೀಪುರ: ಸಂವಿಧಾನ ಯತಾವತ್ತಾಗಿ ಜಾರಿಯಾಗದ ಹೊರತು ದೇಶದಲ್ಲಿ ಸಮಾನತೆ ಕಾಣಲಾಗದು ಎಂದು ಡಿಎಸ್‌ಎಸ್ ಸಂಚಾಲಕ ಸೋಮಶೇಖರ್ ಅಭಿಪ್ರಾಯಪಟ್ಟರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಜನ್ಮದಿನಾಚರಿಸಿ ಮಾತನಾಡಿದ ಅವರು, ಬಡತನ, ಬಡವ, ಶ್ರೀಮಂತ ಎಂಬ ಬೇದ ಭಾವ ಇದೆ. ಅನಾರೋಗ್ಯ, ಅನಕ್ಷರತೆ ಹಾಗೂ ನಿರುದ್ಯೋಗ ಸಮಸ್ಯೆಗಳು ಇಂದಿಗೂ ಜೀವಂತವಾಗಿವೆ. ಸಮಾಜದ ಕಟ್ಟ ಕಡೆಯ ಸಮುದಾಯದ ವ್ಯಕ್ತಿ ಈ ದೇಶವನ್ನು ಅಳುವಂತಾದರೆ ಮಾತ್ರವೇ ಸಮಾಜಿಕ ಸಮತೋಲನ ಕಾಣಬಹುದು ಎಂದು ಅಂಬೇಡ್ಕರ್‌ ಹೇಳಿದ್ದಾರೆ. ಕಡೇ ಪಕ್ಷ ಅಂಬೇಡ್ಕರ್‌ ತತ್ವ ಸಿದ್ದಾಂತಗಳನ್ನು ಅನುಷ್ಠಾನಕ್ಕೆ ತರುವವರ ಕೊರತೆ ಇದೆ. ನಾವೆಲ್ಲರೂ ಸಂವಿಧಾನವನ್ನು ಗೌರವಿಸಿ ಉಳಿಸುವ ಕೆಲಸ ಮಾಡಬೇಕು. ಆಗ ಮಾತ್ರ ದೇಶ ಸುಭೀಕ್ಷವಾಗಿ ಉಳಿಯುತ್ತದೆ ಎಂದರು.

ತಾಪಂ ಸಿಇಒ ಯೋಗೇಶ್ ಮಾತನಾಡಿ, ಕೇವಲ ನಮ್ಮ ದೇಶ ಮಾತ್ರವಲ್ಲಿ 166 ರಾಷ್ಟ್ರಗಳಲ್ಲಿ ಅಂಬೇಡ್ಕರ್‌ರ ಜನ್ಮದಿನ ಆಚರಿಸಲಾಗುತ್ತಿದೆ. ಅವರ ಶ್ರೇಷ್ಠ ಸಂವಿಧಾನ ಎಲ್ಲರ ಹಿರಿಮೆ ಎಂದರು. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.

ತಹಶೀಲ್ದಾರ್ ಎಸ್.ವಿಶ್ವನಾಥ, ದಲಿತ ಸಮೂದಾಯದ ಮುಖಂಡರಾದ ಮಂಜುನಾಥ, ಉಮೇಶ, ರಾಜಯ್ಯ, ಸಮಾಜಕಲ್ಯಾಣ ಹಾಗೂ ಬಿಸಿಎಂ ಸೇರಿದಂತೆ ನಾನಾ ಇಲಾಖೆ ಸಹಾಯಕ ನಿರ್ದೇಶಕರು, ಕಂದಾಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *