News Karnataka
Saturday, June 10 2023
ಸಿಟಿಜನ್ ಕಾರ್ನರ್

ಸರ್ಕಾರಿ ಸೌಲಭ್ಯ ಸದುಪಯೋಗಕ್ಕೆ ಕರೆ

Municipal President Theertha Kumari distributed a three wheeled bicycle to the disabled people in Belur municipal premises.
Photo Credit : Bharath

ಬೇಲೂರು: ಸರ್ಕಾರದ ಯೋಜನೆಗಳನ್ನು ಹಾಗೂ ಸವಲತ್ತುಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ಹೇಳಿದರು.

ಪುರಸಭೆ ಆವರಣದಲ್ಲಿ ವಿಶೇಷ ಚೇತನರಿಗೆ ಮೂರು ಚಕ್ರದ ಬೈಸಿಕಲ್ ಅನ್ನು ಪಲಾನುಭವಿಗಳಿಗೆ ವಿತರಿಸಿ ನಂತರ ಮಾತನಾಡಿದ ಅವರು, ಸರ್ಕಾರ ವಿಶೇಷ ಚೇತನರಿಗೋಸ್ಕರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿರುವ ಉದ್ದೇಶವೆಂದರೆ ಅವರು ಯಾರನ್ನು ಅವಲಂಬಿತರಾಗಬಾರದು, ಅಲ್ಲದೆ ಅವರಿಗೆ ಎಲ್ಲರಂತೆ ಸಮಾಜದಲ್ಲಿ ಬದುಕುವ ಆತ್ಮಸ್ಥೈರ್ಯವನ್ನು ತುಂಬುವ ಕೆಲಸ ಮಾಡುತ್ತಿದೆ. ಅದಕ್ಕಾಗಿ ಸವಲತ್ತುಗಳನ್ನು ಸರಿಯಾಗಿ ಬಳಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕೆಂದು ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ಮಾತನಾಡಿ ಪುರಸಭೆ ಹಾಗೂ ಎಸ್‌ಎಫ್‌ಸಿ ಅಡಿಯಲ್ಲಿ ವಿಶೇಷ ಚೇತನ ೫ ಪಲಾನುಭವಿಗಳಿಗೆ ಮೂರುಚಕ್ರದ ಬೈಸಿಕಲ್ ವಿತರಿಸುತ್ತಿದ್ದೇವೆ. ಅದನ್ನು ಪಲಾನುಭವಿಗಳು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಂಡು ತಮ್ಮ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕೆಂದು ಹೇಳಿದರು.

ಪುರಸಭೆ ಸದಸ್ಯರಾದ ಅಶೋಕ, ಜಮಲುದ್ದಿನ್, ಗಿರೀಶ, ಜಗದೀಶ, ರತ್ನಾ, ಸತ್ಯನಾರಾಯಣ್, ಮಣಿಶೇಖರ, ಅಶೋಕ, ಫಯಾಜ್ ಅಹಮದ್, ಪುಟ್ಟಸ್ವಾಮಿ, ನಾಮಿನಿ ಸದಸ್ಯರಾದ ರವಿ .ಎಸ್, ಜಗದೀಶ, ಪುರಸಭೆ ನೌಕರರು ಇತರರು ಇದ್ದರು.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *