ಆಲೂರು: ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಪ್ರದಾನಮಂತ್ರಿ, ರಾಜ್ಯಸಭಾ ಸದಸ್ಯರಾದ ಹೆಚ್ ಡಿ ದೇವೇಗೌಡ ರವರ 91 ನೇ ಹುಟ್ಟುಹಬ್ಬದ ಅಂಗವಾಗಿ ತಾಲೂಕು ಜೆಡಿಎಸ್ ಪಕ್ಷದ ವತಿಯಿಂದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ಹಂಚುವ ಮೂಲಕ ಆಚರಿಸಲಾಯಿತು.
ತಾಲೂಕು ಜೆಡಿಎಸ್ ಅಧ್ಯಕ್ಷ ಕೆ ಎಸ್ ಮಂಜೇಗೌಡ ಮಾತನಾಡಿ, ಈ ದೇಶ ಕಂಡ ಹಿರಿಯ ರಾಜಕಾರಣಿ ಹೆಚ್ ಡಿ ದೇವೇಗೌಡ ರವರು ಬಡವರ, ದೀನ ದಲಿತರ, ಅಲ್ಪಸಂಖ್ಯಾತರ ಏಳಿಗೆಗಾಗಿ ಶ್ರಮಿಸಿದವರು. ಮೀಸಲಾತಿಯನ್ನು ನೀಡಿದ ಅವರು ಇಂದು 91ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿ ಕೊಳ್ಳುತ್ತಿರುವ ಅವರಿಗೆ ದೇವರು ಆಯುರಾರೋಗ್ಯವನ್ನು ನೀಡಲಿ ಎಂದರು.
ಬಸ್ ನಿಲ್ದಾಣದ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಬೃಹತ್ ಕೇಕ್ ಕತ್ತರಿಸಿ ಸಿಹಿ ಹಂಚಲಾಯಿತು. ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಕೆ ಎಸ್ ಮಂಜೇಗೌಡ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವೇದ ಸುರೇಶ್, ಉಪಾಧ್ಯಕ್ಷ ನಿಂಗರಾಜು, ಮಾಜಿ ಅಧ್ಯಕ್ಷ ಹೆಚ್ ಬಿ ಧರ್ಮರಾಜು, ನಂದೀಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಸಿ ವಿ ಲಿಂಗರಾಜು, ನಟರಾಜ್ ನಾಕಲಗೂಡು, ಹಾಸನ ಹಾಲು ಒಕ್ಕೂಟದ ನಿರ್ದೇಶಕ ಪಿ ಎಲ್ ನಿಂಗರಾಜ, ಗ್ರಾ.ಪಂ ಸದಸ್ಯರಾದ ಜೈಪಾಲ್, ನಂದೀಶ, ಮಂಜುನಾಥ, ಮುಖಂಡರಾದ ಮಲ್ಲಿಕಾರ್ಜುನ ಮೂರ್ತಿ, ಯೋಗೇಶ್, ಮಂಜೇಗೌಡ, ಜಯಣ್ಣ, ಮಧು, ಸುದರ್ಶನ್ ಪಾಣಿ, ಅಶೋಕ್, ಕಬೀರ್ ಅಹಮದ್, ನಂಜೇಶ್ ಗೌಡ, ವೀರಭದ್ರ ಸ್ವಾಮಿ, ಭರತ್, ಕಾರ್ತಿಕ್ ಬಾಂಬೆ ಸೇರಿದಂತೆ ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ ದೇವೇಗೌಡರವರ ಅಭಿಮಾನಿಗಳು ಇದ್ದರು.