ಬೇಲೂರು: ಪುರಸಭೆಯ 7ನೇ ವಾರ್ಡ್‌ನ ಶುದ್ಧ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಗೆ ಚಾಲನೆ ನೀಡಲಾಯಿತು. ಇದೇ ವೇಳೆ ಮಾತನಾಡಿದ ಪುರಸಭೆ ಅಧ್ಯೆಕ್ಷೆ ತೀರ್ಥಕುಮಾರಿ ವೆಂಕಟೇಶ, ನಾನು ಪುರಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಾಗ ನನಗೆ ಇಲ್ಲಿನ ವಾರ್ಡ್ ನ ಮತದಾರರು ನನ್ನ ಮೇಲೆ ಭರವಸೆ ಇಟ್ಟು ಮತ ಹಾಕಿ ನನ್ನ ಗೆಲ್ಲಿಸಿದ್ದರು. ಅದರಂತೆ ನಾನು ಕೂಡ ಇಲ್ಲಿನ ಬಡಾವಣೆ ಜನರಿಗೆ ಆಶ್ವಾಸನೆ ಕೊಟ್ಟಂತೆ ನಾನು ಈಗ ಪುರಸಭೆ ಅಧ್ಯಕ್ಷೆಯಾಗಿದ್ದು ಅದರಂತೆ ಮೊದಲ ಬಾರಿಗೆ ಈ ವಾರ್ಡ್‌ನಲ್ಲಿಯೇ ಕೆಲಸ ಮಾಡಿಸಬೇಕೆಂಬ ಮಹದಾಸೆಯಂತೆ ಇಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಇದು 15 ಲಕ್ಷದ ಕಾಮಗಾರಿ 5 ವಾರ್ಡ್‌ಗಳಲ್ಲೂ ಇದೇ ರೀತಿ ಪೈಪ್ ಲೈನ್ ಕಾಮಗಾರಿ ಮಾಡಲಾಗುತ್ತಿದೆ ಪಟ್ಟಣದ ಅಭಿವೃದ್ಧಿಯೇ ನನ್ನ ಗುರಿ ಎಂದು ತಿಳಿಸಿದರು.
ನಂತರ ವಾರ್ಡ್‌ನ ನಿಂಗರಾಜು ಮಾತನಾಡಿ, ನಮ್ಮ ಪುರಸಭೆ ವಾರ್ಡ್ ನ ತೀರ್ಥಕುಮಾರಿ ಅಧ್ಯಕ್ಷರಾಗಿದ್ದು ಸಂತೋಷವಾಗಿದೆ. ಇವರ ಕಾರ್ಯ ಒಂದು ದಿನದ ಕೆಲಸವಲ್ಲ ಇವರು ಇನ್ನೂ ಹಲವಾರು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಬೇಕಿದೆ. ಇವರ ಪತಿಯೂ ಕೂಡ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರರಾಗಿದ್ದರು. ಅವರ ಸಲಹೆ ಸಹಕಾರ ಪಡೆದು ಪಟ್ಟಣದ ಅಭಿವೃದ್ಧಿ ಇನ್ನೂ ಹೆಚ್ಚಿನ ರೀತಿಯಲ್ಲಿ ಆಗಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಾರ್ಡ್‌ನ ಈಶಣ್ಣ, ಮಧು, ಉಷಾ, ಚಿದಾನಂದ್, ದೇವಿರಮ್ಮ, ಮಂಜೋಜಿರಾವ್, ರುಕ್ಮಿಣಿ, ಪುರಸಭೆಯ ನಾಮಿನಿ ಸದಸ್ಯ ಪೈಂಟ್ ರವಿ, ಪುರಸಭೆ ಆರೋಗ್ಯ ಅಧಿಕಾರಿ ಲೋಹಿತ್, ಹರೀಶ, ಗುತ್ತಿಗೆದಾರ ವಿನೋದ ಹಾಗೂ ಪುರಸಭೆ ಸಿಬ್ಬಂದಿಗಳು ಹಾಜರಿದ್ದರು.