News Karnataka
Saturday, June 10 2023
ಸಿಟಿಜನ್ ಕಾರ್ನರ್

ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ

For the last four days, the villagers of Chinnahalli and Hosagadde protested at the office of Visvesvaraya Irrigation Corporation.
Photo Credit : Bharath

ಸಕಲೇಶಪುರ: ಕಳೆದ ನಾಲ್ಕು ದಿನಗಳಿಂದ ಚಿನ್ನಹಳ್ಳಿ ಗ್ರಾಮಸ್ಥರು ವಿಶ್ವೇಶ್ವರಯ್ಯ ನೀರಾವರಿ ನಿಗಮದ ಕಚೇರಿಯ ಹತ್ತಿರ ನಡೆಸುತ್ತಿದ್ದಅಹೋರಾತ್ರಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದರು.

ಚೀರಿ ಚಿನ್ನಹಳ್ಳಿ ಹಾಗು ಹೊಸಗದ್ದೆ ಗ್ರಾಮಸ್ಥರು ಒಗ್ಗೂಡಿ ಮಾಡಿದ ಹೋರಾಟದ ಬಗ್ಗೆ ಅವರೆಲ್ಲರನ್ನು ಕೂಡ ಪ್ರಶಂಸೆ ಮಾಡಿದ ಶಾಸಕರು ಯಾವುದೇ ಸಮಸ್ಯೆ ಪರಿಹಾರ ಆಗ್ಬೇಕಾದ್ರೆ ಹೋರಾಟಗಳಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಚೀರಿ ಚಿನ್ನ ಹಳ್ಳಿ ಗ್ರಾಮಗಳು ತೀರಾ ಕುಗ್ರಾಮಗಳು. ಈ ಹಳ್ಳಿಗಳ ಅಭಿವೃದ್ಧಿಯನ್ನು ಮುಂದಿನ ದಿನಗಳಲ್ಲಿಆದ್ಯತೆ ಮೇರೆಗೆ ಮಾಡುವೆ. ಸಕಲೇಶಪುರದ ಅಭಿವೃದ್ಧಿಗೆ ಸರಕಾರದಿಂದ ಇನ್ನಷ್ಟು ಅನುದಾನ ಬೇಕಾಗಿದೆ. ಮುಂದಿನ ದಿನಗಳಲ್ಲಿ ಮುಖ್ಯ ಮಂತ್ರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹಾರ ಮಾಡುವುದಾಗಿ ಅವರು ತಿಳಿಸಿದ್ದಾರೆ. ಶಾಸಕರ ಈ ಭರವಸೆಯಿಂದ ನಾಲ್ಕು ದಿನಗಳಿಂದ ನಡೆಸುತ್ತಿದ್ದ ಧರಣಿಯನ್ನು ಕೈ ಬಿಟ್ಟಿರುವುದಾಗಿ ಧರಣಿ ನಿರತರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಚಂಚಲ ಕುಮಾರಸ್ವಾಮಿ, ಸುಪ್ರದೀಪ್ಯ ಜಮಾನ್, ಮಲೆನಾಡ ರಕ್ಷಣ ಸೇನೆಯ ಸಾಗರ ಜಾನೇ ಕೆರೆ, ದರ್ಶನ್ ಪೂಜಾರಿ, ವಸಂತ, ಸುಳ್ಳಕ್ಕಿ ತೇಜೇಶ್, ಸತೀಶ್ ಬೆಳಗೋಡು, ಪ್ರಕಾಶ ಪೂಜಾರಿ, ಚಂದ್ರು ಸುಳ್ಳಕ್ಕಿ, ರುತೇಶ್ ಬಾಗೆ, ಲಕ್ಷ್ಮಣ್ ಚೀರಿ, ಗಿರೀಶ್, ಮಹಿಳೆಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *