ಹಾಸನ: ಉದ್ದೇಶಿತ ಕೈಗಾರಿಕೆ ಆಹಾರ ಪಾರ್ಕ್‌ನ್ನು ಹಾಸನದಲ್ಲಿ ಸೃಷ್ಠಿ ಮಾಡಲು ತ್ವರಿತಗತಿಯಲ್ಲಿ ನಮಗೆ ಅನುಮತಿ ನೀಡದ ಹೋದರೇ ಮುಂದಿನ ದಿನಗಳಲ್ಲಿ ಸರಕಾರದ ವಿರುದ್ಧ ಪ್ರತಿಭಟನೆಯ ಹಾದಿ ಹಿಡಿಯಲಾಗುವುದು ಎಂದು ಒಡನಹಳ್ಳಿ ಪುಡ್ ಪಾರ್ಕ್ ಸಿಇಓ ಅಶೋಕ್ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಈಗಿನ ಸರಕಾರವು ಅಧಿಕಾರಕ್ಕೆ ಬರುವ ಮೊದಲು 5 ಗ್ಯಾರಂಟಿಗಳನ್ನೂ ನಿಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುತ್ತೀರಿ ಮತ್ತು ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ತಾತ್ವಿಕ ಒಪ್ಪಿಗೆ ಕೂಡ ಕೊಟ್ಟಿರುತ್ತೀರಿ. ಇದು ಕರ್ನಾಟಕ ಜನತೆ ಬಹಳ ಖುಷಿ ಪಡುವ ವಿಷಯವಾಗಿರುತ್ತದೆ. ಇದರಲ್ಲಿ ಒಂದು ಪ್ರಮುಖವಾದ ಗ್ಯಾರಂಟಿ “ಯುವನಿಧಿ” ಪದವಿ ಪೂರೈಸಿರುವ ವಿದ್ಯಾಥಿಗಳಿಗೆ ಪ್ರತಿ ಮಾಹೆ 3,000 ಮತ್ತು ಡಿಪ್ಲೋಮ ಪೂರೈಸಿರುವ ವಿದ್ಯಾಥಿಗಳಿಗೆ ಪ್ರತಿ ಮಾಹೆ 1,500 ರೂಪಾಯಿಗಳು ಅವರಿಗೆ ಕೆಲಸ ಸಿಗುವವರೆಗೆ ಅಥವಾ 2 ವರ್ಷದವರೆಗೆ ಕೊಡುವುದು ಇದರ ಉದ್ದೇಶ ಆಗಿರುತ್ತದೆ. ತಾವು ತೆಗೆದು ಕೊಂಡಿರುವ ಈ ನಿರ್ಧಾರವು ಬಹಳ ಸ್ವಾಗತಾರ್ಹವಾಗಿರುತ್ತದೆ. ಮತ್ತು ಎರಡನೇ ದರ್ಜೆ ನಗರಗಳಲ್ಲಿ ಅಂದರೆ ಹಾಸನ ತುಮಕೂರು ಮುಂತಾದ ನಗರಗಳಲ್ಲಿ ಕೈಗಾರಿಕೆ ಸ್ಥಾಪನೆ ಬಗ್ಗೆ ಕೂಡ ತಾವುಗಳು ತಮ್ಮ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಾಗಿದೆ ಎಂದರು.
ಈಗಿರುವ ಒಂದು ಪ್ರಶ್ನೆ ಎಂದರೇ ಉದ್ಯೋಗ ಸೃಷ್ಟಿಸುವವರು ಯಾರು? ಬಂಡವಾಳ ಹೂಡುವವರು ಯಾರು ಎನ್ನುವುದು. ಈಗಾಗಲೇ ಕಳೆದ ನವೆಂಬರ್ ನಲ್ಲಿ ನಡೆದ ವಿಶ್ವ ಹೂಡಿಕೆ ಸಮ್ಮೇಳನದಲ್ಲಿ ನಾವು ಕೂಡ ಭಾಗವಹಿಸಿದ್ದೆವು, ಆದರೆ ಹಿಂದಿನ ಸರ್ಕಾರದ ಕೈಗಾರಿಕಾ ಮಂತ್ರಿಯಾಗಿದ್ದ ಮುರುಗೇಶ್ ನಿರಾಣಿಯವರಿಗೆ ನಮ್ಮ 30 ಕೋಟಿ ಹೂಡಿಕೆ ಬಗ್ಗೆ ತಿಳಿಸಿದ್ದೆವು, ಆದರೆ ಅವರಿಂದ ಯಾವುದೇ ಸೂಕ್ತ ಪ್ರತಿಕ್ರಿಯೆ ಬಾರದ ಕಾರಣ ಅದು ನೆನೆಗುದಿಗೆ ಬಿದ್ದಿದೆ. ಈಗ ನಿಮ್ಮ ನೂತನ ಸರ್ಕಾರ ಅಸ್ತಿತ್ವದಲ್ಲಿರುವ ಕಾರಣ ನೀವು ಇಬ್ಬರು ನಾಯಕರು ಮತದಾನಕ್ಕೆ 2 ದಿನ ಮುಂಚೆ ತಾವು ಕೆಲವೊಂದು ವಿಷಯಗಳ ಬಗ್ಗೆ ಪ್ರಸ್ತಾಪಿಸುತ್ತಾ ಮೇಲಿನ ಸಮಸ್ಯೆಗಳ ಬಗ್ಗೆ ಕೂಡ ಪ್ರಸ್ತಾಪಿಸಿರುತ್ತೀರಿ. ಇದನ್ನು ನೋಡಿದ್ದ ನಾನು ಈಗ ನಿಮ್ಮ ಮುಂದೆ ಕೆಲ ಬೇಡಿಕೆ ಇಡುತ್ತ ಮತ್ತು ಇದನ್ನು ತ್ವರಿತಗತಿಯಲ್ಲಿ ನಮಗೆ ಅನುಮತಿ ನೀಡಬೇಕೆಂದು ನಿಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತ ನಿಮ್ಮ ಈ ಗ್ಯಾರಂಟಿಗೆ ನಮ್ಮದೊಂದು ಅಳಿಲು ಸೇವೆ ಎಂದು ಭಾವಿಸಿಕೊಳ್ಳಿ ಎಂದು ಪ್ರಾರ್ಥಿಸಿಕೊಳ್ಳುತ್ತೇವೆ ಎಂದು ಹೇಳಿದರು.
ಹೂಡಿಕೆ ಮೊತ್ತ 30 ಕೋಟಿ, ಆಯ್ಕೆ ಮಾಡಿಕೊಂಡಿರುವ ಜಿಲ್ಲೆ ಹಾಸನವಾಗಿದ್ದು, ಉದ್ದೇಶಿತ ಕೈಗಾರಿಕೆ ಆಹಾರ ಪಾರ್ಕ್ ಸೃಷ್ಠಿ ಮಾಡಿ, ನೇರವಾಗಿ ಉದ್ಯೋಗ ಕೊಡುವುದಾಗಿದೆ. ಲಾಭ ಪಡೆದುಕೊಳ್ಳುವವರು ಅಂದಾಜು 2 ಸಾವಿರ ಕುಟುಂಬಗಳು, 120 ಎಕರೆ ಭೂಮಿ ಅಗತ್ಯವಾಗಿದ್ದು, ಈ ಎಲ್ಲಾವನ್ನು ಪರಿಹರಿಸಿಕೊಡಬೇಕೆಂದು ಮನವಿ ಮಾಡುವುದಾಗಿ ತಿಳಿಸಿದರು.