ಬೇಲೂರು: ಬೇಲೂರು ತಾಲೂಕು ಮಾದಿಹಳ್ಳಿ ಹೋಬಳಿ ಶಿವಯೋಗಿಪುರ ಗ್ರಾಮದ ನಿವಾಸಿ ನಾಗರಾಜು ಬಿನ್ ನಿಂಗಯ್ಯ ರವರಿಗೆ ಸೇರಿದ ಮೂರು ಹಸುಗಳಿಗೆ ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮದ್ಯಾಹ್ನ 2.30ರ ಸುಮಾರಿಗೆ, ಭಾರಿ ಗುಡುಗು ಸಿಡಿಲಿನಿಂದ ವರುಣ ಆರ್ಭಟಿಸಿದ ಹಿನ್ನೆಲೆ ಮನೆಯ ಹತ್ತಿರದಲ್ಲಿ ಕಟ್ಟಿ ಹಾಕಿದ ಮೂರು ಹಸುಗಳಿಗೆ ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಸ್ಥಳಕ್ಕೆ ತಾಲೂಕು ದಂಢಾಧಿಕಾರಿ ಎಂ.ಎಸ್ ಮಮತ ಭೇಟಿ ನೀಡಿ ಪರಿಶೀಲಿಸಿ, ಸೂಕ್ತ ಪರಿಹಾರ ನೀಡುವಂತೆ ಸೂಚಿಸಿದ್ದಾರೆ. ಸ್ಥಳದಲ್ಲಿ ಹಗರೆ ತಾಲೂಕು ಕಛೇರಿ ಉಪತಹಸಿಲ್ದಾರ್ ಗಂಗಾಧರ್, ರವಿನ್ಯೂ ಇನ್ಸ್ಪೆಕ್ಟರ್ ಸಂತೋಷ್, ಗ್ರಾಮಲೆಕ್ಕಿಗರು ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.