ಗಂಡಸಿ: ಹೋಬಳಿ ಯಡುವನಹಳ್ಖಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸುಮಾರು ರೂ. ೩ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಇಂದು ಭೂಮಿ ಪೂಜೆ ನೆರವೇರಿಸಿದರು.
ಸಣ್ಣೇನಹಳ್ಳಿಯಿಂದ ತಿಪಟೂರು ತಾಲೂಕು ಗಡಿಗೆ ರಸ್ತೆ ಅಭಿವೃದ್ಧಿ ೫೦ ಲಕ್ಷ, ಶಿವಪುರದಿಂದ ತಿಪಟೂರು ತಾಲೂಕಿನ ಗಡಿಗೆ ರಸ್ತೆ ಅಭಿವೃದ್ಧಿ ೧೦೦ ಲಕ್ಷ, ಮಲ್ಲೇನಹಳ್ಳಿಯಿಂದ ತಿಪಟೂರು ತಾಲೂಕು ಗಡಿಗೆ ರಸ್ತೆ ಅಭಿವೃದ್ಧಿ ೫೦ ಲಕ್ಷ, ಹಂದಿಜೋಗಿ ಕಾಲೋನಿಗೆ ರಸ್ತೆ ಅಭಿವೃದ್ಧಿ ೫೦ ಲಕ್ಷ ಜೀಕನಹಳ್ಳಿ , ಜಾಬಿಗೇನಹಳ್ಳಿ ಮತ್ತು ಜಿ.ಜಿ.ಕೊಪ್ಪಲು ಗ್ರಾಮಗಳ ಪರಿಮಿತಿಯಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಲಾಗುವುದು.
ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲೇನಹಳ್ಳಿ ಶಿವಶಂಕರಸ್ವಾಮಿ, ಮಲ್ಲಾಪುರ ಮಂಜುರಾಜು, ಗಿಡ್ಡೇಗೌಡನಕೊಪ್ಪಲು ಮಂಜಣ್ಣ, ರವಿ, ಗ್ರಾ.ಪಂ ಸದಸ್ಯರಾದ ಯತೀಶ ಹಾಗೂ ಗ್ರಾಮಸ್ಥರು ಹಾಜರಿದ್ದರು.