ಹಾಸನ: ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಭಗವಾನ್ ಮಹಾವೀರರ ವಿಚಾರಧಾರೆಗಳು, ತತ್ವಗಳು, ಭೋದನೆಗಳನ್ನು ಅಳವಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನ ತಿಳಿಸಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಜಿಲ್ಲಾಧಿಕಾರಿ ನ್ಯಾಯಾಂಗ ಸಭಾಂಗಣದಲ್ಲಿಂದು ಏರ್ಪಡಿಸಲಾಗಿದ್ದ ಭಗವಾನ ಮಹಾವೀರರ ಜಯಂತಿಯಂದು ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು ಮಹಾವೀರರು ಸತ್ಯ, ಅಹಿಂಸೆ, ತ್ಯಾಗಕ್ಕೆ ಹೆಸರು ವಾಸಿಯಾದವರು ಅದರ ಮೂಲಕವೇ ಸಮಾಜಕ್ಕೆ ಶಾಂತಿಯ ಸಂದೇಶವನ್ನು ಸಾರಿದರು ಹಾಗೂ ನಮಗೆಲ್ಲ ಸ್ಪೂರ್ತಿದಾಯಕರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ಎಂ.ಧನಪಾಲ, ಎಂ.ಅಜಿತ್‌ಕುಮಾರ್ ಮಹಾವೀರ ಬನ್ಸಾರಿ, ಡಾ.ಜಯಂತಿಲಾಲ್ ಕೊಠಾರಿ, ದರ್ಶನ, ಸುದರ್ಶನ, ಹಿರಿಯ ಸ್ವಾತಂತ್ಯ್ರ ಹೋರಾಟಗಾರರಾದ ಶಿವಣ್ಣ, ಸಮಾಜ ಸೇವಕರಾದ ಮಹಾಂತಪ್ಪ ಹಾಗೂ ಮತ್ತಿತರರು ಹಾಜರಿದ್ದರು.