ಹಾಸನ: ಜಿಲ್ಲಾ ಪೊಲೀಸರು ೨೦೨೨ – ೨೦೨೩ ಮಾರ್ಚ್ ೨೭ರ ವರೆಗಿನ ದಾಖಲಾದ ಪ್ರಕರಣಗಳ ಪೈಕಿ ಪತ್ತೆ ಹಚ್ಚಲಾದ ೬೬ ಪ್ರಕರಣಗಳಲ್ಲಿ ೭೯ ಆರೋಪಿಗಳನ್ನು ಬಂಧಿಸಿ ವಶಕ್ಕೆ ಪಡೆದ ೨.೦೮ ಕೋಟಿ ರೂಗಳ ಚಿನ್ನಾಭರಣ, ನಗದು, ಮೊಬೈಲ್, ವಾಹನಗಳನ್ನು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಹರಿರಾಮ ಶಂಕರ ನೇತೃತ್ವದಲ್ಲಿ ವಾರಸುದಾರರಿಗೆ ಹಿಂದಿರುಗಿಸಲಾಯಿತು.
ಅರಸೀಕೆರೆ ಉಪ ವಿಭಾಗದ ೧೭ ಪ್ರಕರಣ, ಹಾಸನ ೨೭ ಪ್ರಕರಣ, ಹೊಳೆನರಸೀಪುರದ ೧೧, ಚನ್ನರಾಯ ಪಟ್ಟಣ ೪, ಸಕಲೇಶಪುರ ೭ ಸೇರಿದಂತೆ ೬೬ ಪ್ರಕರಣಗಳಲ್ಲಿ ೨ ಕೊಲೆ, ೫ ಡಕಾಯಿತಿ, ೧೦ ಸುಲಿಗೆ, ೨೮ ಹಗಲು/ ರಾತ್ರಿ ಮನೆಕಳ್ಳತನ, ೧೭ ಸಾಮಾನ್ಯ ಕಳವು, ೪ ನಂಬಿಕೆ ದ್ರೋಹ ಪ್ರಕರಣಗಳು ಸೇರಿವೆ. ಈ ಪ್ರಕರಣಗಳಿಂದ ಒಟ್ಟು ೪೨೯೬.೧೬ ಗ್ರಾಂ ನ ೧,೮೧, ೩೩,೩೬೦ ಕೋಟಿ ಚಿನ್ನದ ಆಭರಣ, ೩.೩೨,೭೦೦ ಲಕ್ಷ ಮೌಲ್ಯದ ೫,೪೧೫ ಗ್ರಾಂ ಬೆಳ್ಳಿ ಆಭರಣ, ಸುಮಾರು ೧೫,೪೮,೬೩೪ ನಗದು, ೫೦೦೦ ಮೌಲ್ಯದ ೧ ಮೊಬೈಲ್, ೩.೯೫ ಲಕ್ಷದ ೧೧ ಬೈಕ್ಗಳು, ೧.೯೦ ಲಕ್ಷದ ಮಹಿಂದ್ರ ಜೀಪ್, ೨.೪೬ ಲಕ್ಷದ ೨೧ ಬ್ಯಾಟರಿ ಸೇರಿದಂತೆ ಒಟ್ಟು ೨.೦೮, ೫೦,೬೯೪ ಮೌಲ್ಯದ ನಗದು ಹಾಗೂ ಸ್ವತ್ತುಗಳನ್ನು ವಶಕ್ಕೆ ನೀಡಲಾಗಿದೆ.