ಬೇಲೂರು: ತಾಲೂಕು ಜೆಡಿಎಸ್ ಘಟಕದ ವತಿಯಿಂದ 91ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಹುಟ್ಟುಹಬ್ಬದ ಅಂಗವಾಗಿ ಚನ್ನಕೇಶವ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಮಾಜಿ ಶಾಸಕ ಕೆ. ಎಸ್. ಲಿಂಗೇಶ್ ಅವರು ಮಣ್ಣಿನ ಮಗ ಹೆಚ್ ಡಿ ದೇವೇಗೌಡರು ಇಂದು 91ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅವರಿಗೆ ಆರೋಗ್ಯ ಭಾಗ್ಯವನ್ನು ದೇವರು ನೀಡಲಿ. ಅವರ ಶ್ರೀ ರಕ್ಷೆಯಲ್ಲಿ ಪಕ್ಷವನ್ನು ಮುಂದಿನ ದಿನದಲ್ಲಿ ಹೆಚ್ಚಿನ ಸದೃಡ ರೀತಿಯಲ್ಲಿ ಬೆಳೆಯಲಿ ಹಾಗೇ ಯುವ ಘಟಕದ ವತಿಯಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ನಂತರ ಮಾತನಾಡಿದ ತಾಲೂಕು ಅಧ್ಯಕ್ಷರಾದ ತೊಚ ಅನಂತ ಸುಬ್ಬರಾಯ್ ಪ್ರತೀ ವರ್ಷದಂತೆ ಅವರ ಹುಟ್ಟು ಹಬ್ಬದ ದಿನದಂದು ಚನ್ನಕೇಶವ ಪರಮ ಭಕ್ತರಾಗಿರುವ ಅವರ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಈ ಇಳಿವಯಸ್ಸಿನಲ್ಲಿ ಅವರು ರಾಜಕೀಯ ವಿದ್ಯಾಮಾನಗಳ ಬಗ್ಗೆ ಪ್ರತಿನಿತ್ಯ ಚರ್ಚಿಸುವುದಲ್ಲದೇ ಅವರ ಮಾರ್ಗದರ್ಶನದಲ್ಲಿ ಮುಂದಿನ ದಿನದಲ್ಲಿ ನಾವು ಉತ್ತಮ ಸಾಧನೆ ಮಾಡಲಿದ್ದೇವೆ ಎಂದರು.
ಯುವ ಘಟಕದಿಂದ ಹಾಲು-ಹಣ್ಣು ವಿತರಣೆ
ಈ ವೇಳೆ ಮಾತನಾಡಿದ ತಾಲೂಕು ಯುವ ಜನತಾದಳ ಅಧ್ಯಕ್ಷರಾದ ಉಮೇಶ್ ಈ ದೇಶದ 11ನೇ ಪ್ರಧಾನಿಯಾಗಿ ಹೆಚ್ ಡಿ ದೇವೇಗೌಡರು ತಮ್ಮ ಅಧಿಕಾರ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ನಾವು ನೆನಪಿಸ ಬೇಕಾಗುತ್ತದೆ. ಮಹಿಳಾ ಮೀಸಲಾತಿ, ರೈತರಿಗೆ ರಸಗೊಬ್ಬರ ಸಬ್ಸಿಡಿ, ಕಾವೇರಿ ನೀರಿನ ಸಮಸ್ಯೆ, ಮಹಾದಾಯಿ ಸಮಸ್ಯೆಯ ಹೋರಾಟ ಅವರ ರೈತರ ಮೇಲೆ ಇರುವ ಕಾಳಜಿ ಇಂದಿನ ರಾಜಕಾರಣಿಗಳಿಗೆ ಹಾಗೂ ಯುವಕರಿಗೆ ಮಾರ್ಗದರ್ಶನವಾಗಿದೆ. ಈ ನಿಟ್ಟಿನಲ್ಲಿ ಇಂದು ಬಡವರಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಅವರ ಹೆಸರಿನಲ್ಲಿ ಪ್ರತೀ ವರ್ಷದಂತೆ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು ಹಣ್ಣು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಂ ಎ ನಾಗರಾಜ್, ಬಿಡಿ ಚಂದ್ರೇಗೌಡ, ಸಿ ಹೆಚ್ ಮಹೇಶ್, ರವಿ ಕುಮಾರ್, ಮಹದೇವ್, ಮಲ್ಲೇಗೌಡ, ಲೋಕೇಗೌಡ, ನಾಗೇಶ್ ಯಾದವ್, ಸುರೇಶ್, ಸತೀಶ್, ರಾಮು, ಶ್ರೀ ವತ್ಸ, ನವೀನ್ ಸುನೀಲ್ ದೊಡ್ಡಿಹಳ್ಳಿ, ಹರೀಶ್ ಇತರರು ಹಾಜರಿದ್ದರು.