ಆಲೂರು: ಪಟ್ಟಣ ಪಂಚಾಯತಿ ಅಧ್ಯಕ್ಷೆ ವೇದಾ ಸುರೇಶ್ ಅಧ್ಯಕ್ಷತೆಯಲ್ಲಿ ಆಲೂರು ಪಟ್ಟಣ ಪಂಚಾಯತಿ ವಿಶೇಷ ಸಭೆ ನಡೆಯಿತು. ಸಭೆಯಲ್ಲಿ ಇ-ಪೆಕ್ಯೂರ್ಮೆಂಟ್ ಮೂಲಕ ಹರಾಜಾದ ವಾಣಿಜ್ಯ ಸಂಕಿರ್ಣ ಮಳಿಗೆಗಳ ಹರಾಜು ಹಾಗೂ 2023-24ನೇ ಸಾಲಿನ ವಾರದ ಸಂತೆ ಸುಂಕ, ದಿನವಹಿ ತರಕಾರಿ ಮಾರುಕಟ್ಟೆ ಸುಂಕ ಹರಾಜನ್ನು ಅನುಮೋದಿಸಲಾಯಿತು.
ಇದೇ ಸಂದರ್ಭದಲ್ಲಿ ಇತ್ತೀಚಿಗೆ ನಿಧನರಾದ ಕಾಂಗ್ರೆಸ್ ನಾಯಕ ಧ್ರುವ ನಾರಾಯಣ್ ಹಾಗೂ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿರವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಸಭೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವೇದಾ ಸುರೇಶ, ಉಪಾಧ್ಯಕ್ಷ ನಿಂಗರಾಜ, ಸದಸ್ಯರುಗಳಾದ ತೋಫಿಕ್, ಹರೀಶ, ಸಂತೋಷ, ತಾಹೇರಾ ಬೇಗಂ, ಅಬ್ದುಲ್ ಖುದ್ದೂಸ್, ಅರುಣ್ ಕುಮಾರ್, ನಾಮ ನಿರ್ದೇಶಿತ ಸದಸ್ಯರುಗಳಾದ ಎ. ಹೆಚ್. ರಮೇಶ, ಕ್ಯಾಂಟೀನ್ ನಾಗರಾಜ, ರವಿಕುಮಾರ್, ಮುಖ್ಯಾಧಿಕಾರಿ ನಟರಾಜ್, ಸಿಬ್ಬಂದಿ ಮಂಜುನಾಥ ಇದ್ದರು.