ಹಾಸನ: 2023ರ ಹಾಸನ ವಿಧಾನಸಭಾ ಚುನಾವಣೆಯನ್ನು ಶಾಂತಿಯುತವಾಗಿ ಮತ್ತು ಯಶಸ್ವಿಯಾಗಿ ನಡೆಸಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಚುನಾವಣಾ ಸಹಾಯಕ ಅಧಿಕಾರಿ ಶ್ವೇತ ರವೀಂದ್ರ ತಿಳಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮಾರ್ಚ್ 29ರಿಂದ ವಿಧಾನಸಬಾ ಚುನಾವಣೆ ನೀತಿ ಸಂಹಿತೆ ಪ್ರಾರಂಭವಾಗಿದೆ. ಏಪ್ರಿಲ್ 13ನೇ ದಿನಾಂಕದಿಂದಲೂ ಅಧಿಕೃತವಾಗಿ ಗೆಜೆಟ್ ಅಧಿಸೂಚನೆ ಕೂಡ ಬಿಡುಗಡೆ ಆಗಲಿದೆ. ಈ ಸಂಬಂಧ 20ರಂದು ನಾಮ ನಿರ್ದೇಶನ ಪರಿಶೀಲನೆ ಎಲ್ಲಾವನ್ನು ಚುನಾವಣೆ ನಿಯಮದಂತೆ ಶಾಂತಿಯುತವಾಗಿ ಯಶಸ್ವಿ ಮತದಾನ ನಡೆಸಲು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಮತ್ತು ಚುನಾವಣಾ ಆಯೋಗದ ನಿರ್ದೇಶನದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಏಪ್ರಿಲ್ 20 ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ ಏ. 21ರಂದು ನಾಮಪತ್ರಗಳ ಪರೀಶೀಲನೆ ದಿನವಾಗಿದ್ದು, ಏ.24ರಂದು ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನ, ಮೇ10 ರಂದು ಮತದಾನ ನಡೆಯುವುದು, ಮೇ. 13ರಂದು ಮತ ಏಣಿಕೆ ಕಾರ್ಯವು ನಡೆಯುತ್ತದೆ ಹಾಗೂ ಮೇ 15 ರಂದು ಚುನಾವಣೆ ಪ್ರಕ್ರಿಯೆ ಪುರ್ಣಗೂಳ್ಳುತ್ತದೆ ಎಂದು ತಿಳಿಸಿದರು.
ಹಾಸನ ವಿಧಾನಸಭಾ ಕ್ಷೇತ್ರ 196ನಲ್ಲಿ 276 ಬೂತುಗಳಿದ್ದು, ಒಟ್ಟು 2 ಲಕ್ಷದ 14 ಸಾವಿರ 732 ಜನ ಮತದಾರರು ಇದ್ದಾರೆ. 1 ಲಕ್ಷದ 6 ಸಾವಿರದ 248 ಪುರುಷ ಮತದಾರರಿದ್ದು, 1 ಲಕ್ಷದ 8 ಸಾವಿರದ 454 ಜನ ಮಹಿಳಾ ಮತದಾರರು ಇದ್ದಾರೆ. ಇತರೆ 10 ಜನರು ಸೇರುತ್ತಾರೆ. ನಮ್ಮಲ್ಲಿ ಮತಗಟ್ಟೆಯನ್ನು ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಎರಡು ರೀತಿ ಮಾಡಿಕೊಂಡಿದ್ದು, ನಮ್ಮಲ್ಲಿ ಕ್ರಿಟಿಕಲ್ ಬೂತಗಳು 111 ಇದೆ. ಹನುಮಂತಪುರ, ಚನ್ನಪಟ್ಟಣ, ಉದ್ದೂರು ಬೈಪಾಸ್, ಬಿ.ಕಾಟೀಹಳ್ಳಿ, ತವರ ದೇವರ ಕೊಪ್ಪಲು, ದೇವರಾಯ ಪಟ್ಟಣ, ಗುಂಡನಹಳ್ಳಿ ಸೇರಿ ಏಳು ಚೆಕ್ ಪೋಸ್ಟ್ ಗಳನ್ನು, 21 ಶಿಫ್ಟ್ ಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
276 ಬೂತ್‌ಗಳಿಗೆ 27 ಸೆಕ್ಟರ್ ಅಧಿಕಾರಿಗಳನ್ನು ಮಾಡಲಾಗಿದೆ. 80 ವರ್ಷ ಮೇಲ್ಪಟ್ಟವರು, ಸೀನಿಯರ್ ಸಿಟಿಜನ್ ಅವರಿಗೆ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ನಿರ್ದೇಶನ ಬಂದಿದೆ. ಜಾತ್ರೆ, ಸಭೆ, ಸಮಾರಂಭಗಳಿಗೆ ಕಡ್ಡಾಯವಾಗಿ ಅನುಮತಿ ಪಡೆಯಲೇಬೇಕು. ಫ್ರಿಂಟ್ ಮೀಡಿಯದವರು ಅನುಮತಿ ಪಡೆಯಲಾಗುತ್ತಿದ್ದು, ಆದರೇ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಅನುಮತಿ ಪಡೆಯುವುದು ಕಡ್ಡಾಯವಿದ್ದು, ವಾಟ್ಸಾಪ್ ಟ್ವಿಟರ್, ಫೇಸ್ ಬುಕ್, ಇನ್‌ಸ್ಟ್ರಾ ಗ್ರಾಮ್ ಇತರ ಜಾಲತಾಣದಲ್ಲಿ ನಿಮ್ಮ ಪಕ್ಷದ ಪರವಾಗಿ ಏನಾದರೂ ಪ್ರಕಟಣೆ, ಜಾಹಿರಾತು ಕೊಡಬೇಕಾದರೇ ಎಂಸಿ ಕಮಿಟಿಯಿಂದ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ಇಲ್ಲವಾದ್ರೆ ಅಂಥವರ ಮೇಲೆ ನಿಗಾವಹಿಸಿ ಪ್ರಕರಣ ದಾಖಲು ಮಾಡಲಾಗುವುದು ಎಂದು ಹೇಳಿದರು.
ಪಕ್ಷಗಳ ಪ್ರಚಾರಕ್ಕೆ ವಾಹನ ಬಳಸುವಾಗಲು ಅನುಮತಿ ಅಗತ್ಯ. ಯಾವುದಾದರೂ ಮಾಹಿತಿ ಪಡೆಯಬೇಕಾದರೇ ಕಂಟ್ರೋಲ್ ರೂಮ್ ತೆರೆದಿದ್ದು, ದಿನದ 24 ಗಂಟೆಯು ಕೂಡ ಕಾರ್ಯ ನಿರ್ವಹಿಸಲಿದೆ. 08172-796375 ಈ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ. ಚುನಾವಣೆ ವೇಳೆ ಯಾವ ಸಮಸ್ಯೆ ಆಗದಂತೆ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಂಡು ಸಜ್ಜಾಗಿದ್ದೇವೆ. ಮತ ಬಹಿಷ್ಕಾರ ಮಾಡಿದ ಕಡೆ ಮನವೊಳಿಸಿ ಮತ ಹಾಕಲು ತಿಳಿ ಹೇಳಿ ಜಾಗೃತಿ ಮೂಡಿಸಲಾಗಿದೆ ಎಂದು ಚುನಾವಣೆ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಚುನಾವಣಾಧಿಕಾರಿ ಕೀರ್ತಿ ಕುಮಾರ್ ಉಪಸ್ಥಿತರಿದ್ದರು.