ಬೇಲೂರು: ಚುನಾವಣಾ ವೆಚ್ಚ ವೀಕ್ಷಕರಾರ ಡಾ. ಕಾರ್ತಿಕೇಯನ್ ಪಾಂಡೆ ಅವರು ಬೇಲೂರು ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ, ವೆಚ್ಚ ನಿರ್ವಹಣೆ ತಂಡದೊಂದಿಗೆ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಸಭೆ ನಡೆಸಿದರು.
ರಾಜಕೀಯ ಪಕ್ಷದ ಅಭ್ಯರ್ಥಿಗಳ ವೆಚ್ಚ ನಿರ್ವಹಣೆ ಮಾಡುವ ಬಗ್ಗೆ ಸೂಚನೆ ನೀಡಿ, ವೆಚ್ಚ ನಿರ್ವಹಣೆ ತಂಡ ನಿರ್ವಹಸುತ್ತಿರುವ ರಿಜಿಸ್ಟರ್ ಗಳನ್ನು ಪರಿಶೀಲನೆ ಮಾಡಿದರು. ನಂತರ ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿ ಮತದಾರರು ಯಾವುದೇ ಒತ್ತಡ ಆಮಿಷಗಳಿಗೆ ಒಳಗಾಗದೆ ಪ್ರಾಮಾಣಿಕವಾಗಿ ನಿಮ್ಮ ಮತವನ್ನು ಚಲಾಯಿಸಲು ತಿಳಿಸಿದರು.
ಇಂದಿನಿಂದ ಕ್ಷೇತ್ರದಲ್ಲಿ ಹಾಜರಿರುವುದರಿಂದ ಕ್ಷೇತ್ರದಲ್ಲಿ ಹಣ, ಮಧ್ಯ, ಇತರ ವಸ್ತುಗಳನ್ನು ಹಂಚುವುದು ಕಂಡುಬಂದಲ್ಲಿ ದೂರು ನೀಡಬಹುದು ಹಾಗೂ ನೇರವಾಗಿ ನನಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದರು.
ನಂತರ ಚೆನ್ನಾಪುರ ಕಸಬಾ ಹೋಬಳಿ, ಮಾಯಗೊಂಡನಹಳ್ಳಿ ಮತ್ತು ಜಾವಗಲ್ ಚೆಕ್‌ಪೋಸ್ಟ್‌ಗಳಿಗೆ ಖುದ್ದು ವಾಹನಗಳನ್ನು ತಪಾಸಣೆ ಮಾಡಿದರು. ಪ್ರತಿಯೊಂದು ವಾಹನಗಳನ್ನು ತಪಾಸಣೆ ಮಾಡಲು ಹಾಗೂ ಚುನಾವಣೆ ಸಿಬ್ಬಂದಿಗಳು ರಾತ್ರಿ ಸಮಯದಲ್ಲಿ ಎಚ್ಚರಿಕೆಯಿಂದ ಸುರಕ್ಷತೆಯಿಂದ ವಾಹನಗಳನ್ನು ತಪಾಸಣೆ ಮಾಡಲು ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ತಹಶೀಲ್ದಾರ ಎಂ. ಮಮತಾ ಹಾಗೂ ಸಿಬ್ಬಂದಿಗಳು ಇದ್ದರು.