ಹಾಸನ: ಅರಸೀಕೆರೆ ತಾಲೂಕಿನ ಅಬ್ಬನಘಟ್ಟ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಕುಮಾರಸ್ವಾಮಿ ಅವರು ಕರ್ತವ್ಯ ಲೋಪ ಮತ್ತು ದುರ್ನಡತೆ ತೋರಿದ ಹಿನ್ನೆಲೆಯಲ್ಲಿ ಅವರನ್ನು ಜಿಲ್ಲಾಧಿಕಾರಿ ಅಮಾನತುಪಡಿಸಿ ಆದೇಶ ಹೊರಡಿಸಿದ್ದಾರೆ.
ಕರ್ತವ್ಯದಲ್ಲಿ ನಿರ್ಲಕ್ಷ್ಯತನ ಮತ್ತು ಮೇಲಧಿಕಾರಿಗಳ ವಿರುದ್ಧ ದುರ್ನಡತೆ ತೋರಿದ್ದಲ್ಲದೆ ಸುಳ್ಳು ಮಾಹಿತಿ ನೀಡಿರುವ ಪಿಡಿಓ ಕುಮಾರಸ್ವಾಮಿಯವರನ್ನು ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಅವರು ಪ್ರಜಾಪ್ರತಿನಿಧಿ ಕಾಯ್ದೆ 1951ರ ಸರ್ಕಾರಿ ಅಧಿಕಾರಿ ಸೇವೆ ನಿಯಮಗಳನ್ವಯ ಅವರನ್ನು ಅಮಾನತುಪಡಿಸಿದ್ದಾರೆ.