ಜಾವಗಲ್: ನಗರದಲ್ಲಿ ಮಳೆ ಗಾಳಿ ಹೆಚ್ಚಾದ ಪರಿಣಾಮ ಅನೇಕ ತೆಂಗಿನ ಮರಗಳು ಟ್ರ್ಯಾಕ್ಟರ್ ಮೇಲೆ ಬಿದ್ದ ಪರಿಣಾಮ ರೈತ ಇಂದ್ರೇಶ್ ಟ್ರ್ಯಾಕ್ಟರ್ ಜಖಂ ಆಗಿ ಅಪಾರ ನಷ್ಟವಾಗಿದೆ.
ರೈತ ಇಂದ್ರೇಶ್ ಮಾತನಾಡಿ, ಶನಿವಾರ ಸುರಿದ ಬಿರುಗಾಳಿ ಸಹಿತ ಸಿಡಿಲು ಮಳೆಗೆ ಅನೇಕ ರೈತಾಪಿ ವರ್ಗದ ಜನಕ್ಕೆ ಅನೇಕ ನಷ್ಟವಾಗಿದೆ. ಮಳೆ ಕಾರಣ ಮನೆಯ ಪಕ್ಕ ಜಮೀನಿನಲ್ಲಿ ನಿಂತ ಟ್ರ್ಯಾಕ್ಟರ್ ಮೇಲೆ ಏಕಾಏಕಿ ಎರಡು ತೆಂಗಿನ ಮರಗಳು ಬಿದ್ದ ಕಾರಣ ಟ್ರ್ಯಾಕ್ಟರ್ ಗೆ ಅಪಾರ ಹಾನಿ ಆಗಿದೆ, ಅಲ್ಲದೆ ಫಲ ಕೊಡುವ 6 ತೆಂಗಿನ ಮರಗಳು ಧರೆಗುಳಿದಿವೆ. ಪ್ರಕೃತಿ ವಿಕೋಪದಲ್ಲಿ ಆಗುವ ನಷ್ಟಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.