ಹಾಸನ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾರ್ಚ್ ೬ರ ಸೋಮವಾರ ಪೌರ ನೌಕರರ ಸಂಘದ ವತಿಯಿಂದ ಮುಖ್ಯಮಂತ್ರಿಗಳ ನಿವಾಸದ ಮುಂದೆ ಸಾಂಕೇತಿಕ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ಸಂಘದಿಂದ ನಗರಸಭೆ ಆಯುಕ್ತ ಪರಮೇಶ್ವರಪ್ಪ, ನಗರಸಭೆ ಅಧ್ಯಕ್ಷ ಆರ್.ಮೋಹನ ಹಾಗೂ ಇತರೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ನಮ್ಮ ನ್ಯಾಯ ಸಮ್ಮತವಾದ ಬೇಡಿಕೆಗಳಾದ ಜ್ಯೋತಿ ಸಂಜೀವಿನಿ, ಕೆಜಿಐಡಿ, ಜಿಪಿಎಫ್, ನೀರು ಸರಬರಾಜು ಸಹಾಯಕರು, ವಾಹನ ಚಾಲಕರು, ಗಾರ್ಡನ್ ಮಾಲಿ, ಹೊರಗುತ್ತಿಗೆ ನೌಕರರು, ಕಂಪ್ಯೂಟರ್ ಆಪರೇಟರ್, ಸೀನಿಯರ್ ಪ್ರೋಗ್ರಾಮರ್, ಜೂನಿಯರ್ ಪ್ರೋಗ್ರಮರ್ ಹಾಗೂ ನೋಡ್ ಇಂಜಿನಿಯರ್, ನೋಡಲ್ ಅಧಿಕಾರಿಗಳು, ಅಕೌಂಟೆಂಟ್, ಐ.ಟಿ ಸ್ಟಾಫ್, ಸ್ಯಾನೀಟರಿ ಸೂಪರ್ ವೈಜರ್, ಬೀದಿದೀಪಗಳ ನಿರ್ವಾಹಣೆ, ಮಲೇರಿಯ ಮತ್ತು ವಿವಿಧ ವೃಂದಗಳ ನೌಕರರ ನೇಮಕಾತಿ ಬಗ್ಗೆ ಅಥವಾ ನೇರ ಪಾವತಿಯ ಬಗ್ಗೆ ಈಗಾಗಲೇ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಪೌರಾಡಳಿತ ಸಚಿವರಾದ ಶ್ರೀ. ಎಂ ನಾಗರಾಜು (ಎಂಟಿಬಿ), ನಗರಾಭಿವೃದ್ಧಿ ಸಚಿವರಾದ ಶ್ರೀ ಬೈರಾತಿ ಬಸವರಾಜು ಹಾಗೂ ಹಣಕಾಸು ಇಲಾಖೆ ಸಚಿವರು ಅಧಿಕಾರಿಗಳಿಗೆ ನಮ್ಮ ಬಹು ಮುಖ್ಯವಾದ ಬೇಡಿಕೆಗಳನ್ನು ಈಡೇರಿಸುವಂತೆ ಅನೇಕ ಬಾರಿ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ದೂರಿದರು.
ದಾವಣಗೆರೆ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಛೇರಿಯ ಒಳಬಾಗದಲ್ಲಿ ತುಂಗಭದ್ರಾ ಸಭಾಂಗಣದಲ್ಲಿ ೨೦೨೩ ಫೆಬ್ರವರಿ ೨೫ ರಂದು ನಡೆದ ತುರ್ತು ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಕರೆಯಲಾಗಿರುತ್ತದೆ. ಈ ಸಭೆಯ ತೀರ್ಮಾನದಂತೆ ಮುಖ್ಯ ಮಂತ್ರಿಗಳು ಹಾಗೂ ಪೌರಾಡಳಿತ ಸಚಿವರು, ನಗರಾಭಿವೃದ್ಧಿ ಸಚಿವರುಗಳು, ಹಾಗೂ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರುಗಳಿಗೆ ಹಲವಾರು ಬಾರಿ ನಮ್ಮ ಅತೀ ಮುಖ್ಯವಾದ ಬೇಡಿಕೆಗಳನ್ನುಈಡೇರಿಸಿಕೊಳ್ಳುವ ಸಲುವಾಗಿ ಮನವಿ ಸಲ್ಲಿಸಲಾಗಿರುತ್ತದೆ ಎಂದರು.
ಜಾಥಾ ಕಾರ್ಯಕ್ರಮಕ್ಕೆ ಹಾಸನ ತಾಲೂಕು ಪೌರ ನೌಕರರ ಸಂಘದ ವತಿಯಿಂದ ಪೌರಕಾರ್ಮಿಕರು, ನೀರು ಸರಬರಾಜು ಸಹಾಯಕರು, ವಾಹನ ಚಾಲಕರು, ಗಾರ್ಡನ್ ಮಾಲಿ, ಹೊರಗುತ್ತಿಗೆ ನೌಕರರು, ಕಂಪ್ಯೂಟರ್ ಆಪರೇಟರ್, ಸೀನಿಯರ್ ಪ್ರೋಗ್ರಾಮರ್, ಜೂನಿಯರ್ ಪ್ರೋಗ್ರಾಮರ್ ಹಾಗೂ ನೋಡ್ ಇಂಜಿನಿಯರ್, ನೋಡಲ್ ಅಧಿಕಾರಿಗಳು, ಅಕೌಂಟೆಂಟ್, ಐ.ಟಿ ಸ್ಟಾಫ್, ಸ್ಯಾನೀಟರಿ ಸೂಪರ್ ವೈಜರ್, ಬೀದಿದೀಪಗಳ ನಿರ್ವಾಹಣೆ, ವಿಭಾಗದ ಎಲ್ಲಾ ನೌಕರರು ಮುಷ್ಕರ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದರು.
ಇದೇ ವೇಳೆ ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಎಂ.ಯೋಗೇಶ, ಉಪಾಧ್ಯಕ್ಷ ರಮೇಶ, ಖಜಾಂಚಿ ಹೆಚ್.ಟಿ. ರಾಮು, ಜಂಠಿ ಕಾರ್ಯದರ್ಶಿ ಎನ್.ಆರ್. ವೆಂಕಟೇಶ ಇತರರು ಉಪಸ್ಥಿತರಿದ್ದರು.