ಸಕಲೇಶಪುರ: ನೂರಾರು ವರ್ಷಗಳಿಂದ ವಾಸ ಮಾಡುತ್ತಿರುವ ದಲಿತರ ಮನೆಗಳನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸಲು ತಯಾರಿ ನಡೆಸಿದ್ದು ದೇಖ್ಲಾ ಗುರ್ಜೆನಹಳ್ಳಿ ದಲಿತರು ಗ್ರಾ.ಪಂ.ಸದಸ್ಯ ನಾಗೇಶ್ ಮತ್ತು ನಿವೆಶನ ಹೋರಾಟ ಸಮಿತಿ ಅಧ್ಯಕ್ಷ ಯೂನಸ್ ನೇತೃತ್ವದಲ್ಲಿ ಪ್ರತಿಭಟಿಸಿದರು.
ನೂರೈವತ್ತು ವರ್ಷ ಅಂದರೆ ನಮ್ಮ ತಾತ ಮುತ್ತಾತಂದಿರ ಕಾಲದಿಂದಲೂ ವಾಸ ಮಾಡುತ್ತಾ ಬಂದಿದ್ದು, ಮನೆಗಳ ಜೊತೆ ಅರ್ಧ ಮತ್ತು ಒಂದು ಎಕ್ರೆ ಭೂಮಿಯಲ್ಲಿ ಕಾಫಿ ಬೆಳೆದು ಸಾಗು ಮಾಡಿರುತ್ತೇವೆ. ನೂರಾರು ಕುಟುಂಬಕ್ಕೆ ಈ ನಿವೇಶನ ಬಿಟ್ಟರೆ ಬೇರೆ ಜಾಗ ಇರುವುದಿಲ್ಲ. ಕೂಡಲೇ ನಮ್ಮ ಮನೆ ತೆರವು ಮಾಡದೆ ಮುಂಜೂರು ಮಾಡಲು ಅನ್ಮೂಲ್ ಜೈನ್ ಅವರಿಗೆ ಮನವಿ ಮಾಡಿದರು. ಈ ಪ್ರತಿಭಟನೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು.