ಬೇಲೂರು: ವಿಶ್ವವಿಖ್ಯಾತ ಶ್ರೀ ಚೆನ್ನಕೇಶವ ಜಾತ್ರಾ ಮಹೋತ್ಸವದ ಅಂಗವಾಗಿ ಆಗಮಿಸಿದ್ದ ಹಾಸನ ಜಿಲ್ಲೆಯ ಕಟ್ಟಾಯ ಹೋಬಳಿಯ ಹೊಸಳ್ಳಿ ಗ್ರಾಮದ ಗಣೇಶ 42 ವರ್ಷ ಎಂಬಾತನು ಸ್ನೇಹಿತರೊಂದಿಗೆ ಶ್ರೀ ಚನ್ನಕೇಶವ ರಥೋತ್ಸವಕ್ಕೆ ಆಗಮಿಸಿ, ಇಂದು ಬೆಳಗ್ಗೆ ವಿಷ್ಣುಸಮುದ್ರದ ಬಳಿ ಇರುವ ಮುಡಿಕಟ್ಟೆಯಲ್ಲಿ ಹರಕೆ ಮುಡಿ ಕೊಟ್ಟು ಸಮೀಪದಲ್ಲಿದ್ದ ಕಲ್ಯಾಣಿಯಲ್ಲಿ ಈಜಾಡಲು ಹೋಗಿ ಉಸಿರುಗಟ್ಟಿ ನೀರು ಕುಡಿದು ಏಕಾಯಕಿ ನೆಲ ಹಿಡಿದ ಸಂದರ್ಭ ಜರುಗಿತು.
ಇದೇ ವೇಳೆ ಪಕ್ಕದಲ್ಲಿದ್ದ ಯುವಕನೋರ್ವ ನೀರಿಗೆ ಇಳಿದು ಮೇಲೆ ಎತ್ತಲಾಗಿದ್ದರೂ ಚೇತರಿಸಿಕೊಳ್ಳದ ಗಣೇಶ್ ನನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಯಿತು. ಈ ಸಂದರ್ಭ ಡಾ. ರಾಜೀವ್ ಪ್ರಥಮ ಚಿಕಿತ್ಸೆ ನೀಡಿದರೂ ಚೇತರಿಸಿಕೊಳ್ಳದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.