ಚನ್ನರಾಯಪಟ್ಟಣ: ತಾಲೂಕಿನ ಕಸಬಾ ಹೋಬಳಿಯ ನಲ್ಲೂರು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿದರು.
ಚನ್ನರಾಯಪಟ್ಟಣ ತಾಲೂಕಿನಲ್ಲಿ ೩೩೯ ಡೈರಿ ನಿರ್ಮಾಣ ಮಾಡಲಾಗಿದೆ. ತಾಲೂಕಿನಾದ್ಯಂತ ಎರಡುವರೆ ಲಕ್ಷ ಹಾಲು ಉತ್ಪಾದನೆ ಮಾಡಲಾಗುತ್ತಿದೆ. ೨೫ ಕೋಟಿ ತಿಂಗಳಿಗೆ ಆದಾಯ ಬರುತ್ತಿದೆ. ಹಾಲು ಉತ್ಪಾದಕರ ಒಕ್ಕೂಟದಲ್ಲಿ ೩೦೦ ಕೋಟಿ ವಾರ್ಷಿಕ ವಹಿವಾಟು ನಡೆಯುತ್ತಿದೆ. ನಮ್ಮ ತಾಲೂಕಿನಲ್ಲಿ ವಾಣಿಜ್ಯ ಬೆಳೆಯಾಗಿ ಕಬ್ಬು ಬೆಳೆಯಲಾಗುತ್ತಿದೆ. ಹೇಮಾವತಿ ಸಕ್ಕರೆ ಕಾರ್ಖಾನೆಯನ್ನು ಖಾಸಗಿಗೆ ನೀಡಿ ವಾರ್ಷಿಕವಾಗಿ ಎಂಟೂವರೆ ಲಕ್ಷ ಟನ್ ಕಬ್ಬು ಅರೆಯಲಾಗುತ್ತಿದೆ. ಇದರಿಂದ ಹೆಚ್ಚು ಕಬ್ಬು ಬೆಳೆಯಲು ಅನುಕೂಲವಾಗುತ್ತದೆ. ರೈತರಿಗೆ ಉಚಿತ ಕಬ್ಬಿನ ಬಿತ್ತನೆ ಕಬ್ಬು ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು. ನಲ್ಲೂರು ಗ್ರಾಮ ದೇವತೆ ಲಕ್ಷ್ಮಿದೇವಿಗೆ ಶಕ್ತಿ ಇದೆ. ನಿತ್ಯ ಪೂಜೆಯಲ್ಲಿ ಪಾಲ್ಗೊಳ್ಳಿ, ಭಜನೆ ಕಾರ್ಯಕ್ರಮ ನಡೆಸಿ, ಪ್ರತಿ ವರ್ಷ ಜಾತ್ರೆ ಉತ್ಸವ ಮಾಡುವ ಮೂಲಕ ಗ್ರಾಮಕ್ಕೆ ಯಾವುದೇ ಕೆಡುಕು ಆಗದಂತೆ ನೋಡಿಕೊಳ್ಳಲಾಗಿದೆ ಎಂದರು.
ಪ್ರತಿಯೊಬ್ಬ ಮನುಷ್ಯರು ತಮ್ಮೊಂದಿಗೆ ಏನು ತೆಗೆದುಕೊಂಡು ಹೋಗೋದಿಲ್ಲ, ಸತ್ತ ನಂತರ ವಿಶ್ವಾಸ, ಪ್ರೀತಿ, ಮಾತ್ರ ಬಿಟ್ಟು ಹೋಗುತ್ತೇವೆ. ನಾನು ಎಲ್ಲಾ ಪಕ್ಷದವರನ್ನು ಪ್ರೀತಿಯಿಂದ ನೊಡುವುದಲ್ಲದೆ, ಸಹಕಾರ ಸಂಘದ ಮೂಲಕ ಬೆಳೆ ಸಾಲ ನೀಡಿ ಕೃಷಿಗೆ ಪ್ರೊತ್ಸಾಹ ನೀಡುತ್ತಿದ್ದೇನೆ ಎಂದು ತಿಳಿಸಿದರು. ಬೇಸಿಗೆ ಬೆಳೆಗೆ ತೊಂದರೆ ಆಗದಂತೆ ನೀರಿನ್ನು ಕೊಡಿಸುತ್ತೇನೆ. ನಲ್ಲೂರು ಗ್ರಾಮದ ಹೊರ ಭಾಗದಲ್ಲಿ ಇರುವ ಸರ್ಕಾರಿ ೧೦ ಎಕರೆ ಭೂಮಿಯಲ್ಲಿ ಮೊರಾರ್ಜಿ ವಸತಿ ಶಾಲೆ ಮಾಡುತ್ತೇನೆ ಎಂದು ನುಡಿದರು.
ದೊಡ್ಡಗನ್ನಿ ಗ್ರಾಮದಲ್ಲಿ ಡೈರಿ ಕಟ್ಟಡ ನಿರ್ಮಾಣ ಮಾಡಲಾಗುವುದು, ದೊಡ್ಡಗನ್ನಿ ಗ್ರಾಮದಲ್ಲಿ ಪಹಣಿ ಕೇಂದ್ರವನ್ನು ಅತಿ ಶೀಘ್ರದಲ್ಲೇ ಉದ್ಘಾಟನೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಶಾಸಕರಾದ ಸಿ.ಎನ್ ಬಾಲಕೃಷ್ಣ, ಸಹಾಯಕ ವ್ಯವಸ್ಥಾಪಕ ಸಿ.ಸಿ ಯೋಗೇಶ, ಸಹಾಯಕ ವ್ಯವಸ್ಥಾಪಕರಾದ ಎಂ ದಯಾನಂದ್, ನಲ್ಲೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ನಲ್ಲೂರೇಗೌಡ, ಉಪಾಧ್ಯಕ್ಷ ಮಂಜುನಾಥ, ಕಾರ್ಯದರ್ಶಿ ಎನ್. ಕೆ. ದಿನೇಶ್, ನಿರ್ದೇಶಕ ಪ್ರಭಾಕರ, ದೇವೇಗೌಡ, ಅಶೋಕ, ಪಾಂಡುರಂಗಸ್ವಾಮಿ, ಶ್ರೀಮತಿ ಧನಲಕ್ಷ್ಮಿ ರಂಗಸ್ವಾಮಿ, ರಮೇಶ್, ಗ್ರಾ.ಪಂ ಪಿಡಿಒ ನಾಗೇಶ್, ಗ್ರಾ.ಪಂ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ದಿನೇಶ್, ಸದಸ್ಯರಾದ ಸರಸ್ವತಿ, ಸಂತೋಷ, ಶ್ರೀಕಲಾ ಡೈರಿ ಕಟ್ಟಡದ ಗುತ್ತಿಗೆದಾರ ನಾಗೇಶ್, ಸೇರಿದಂತೆ ಇತರರು ಹಾಜರಿದ್ದರು.