ಹಾಸನ: ಜಿಲ್ಲಾ ಸವಿತಾ ಸಂಗೀತ ಮಂಗಳವಾದ್ಯ ಕಲಾವಿದರ ಸಂಘ(ರಿ) ವತಿಯಿಂದ ಜ. 1೦ರಂದು ಸಂಗೀತ ಸಮ್ಮೇಳನ ಮತ್ತು ನಾದಬ್ರಹ್ಮ ತ್ಯಾಗ ರಾಜಸ್ವಾಮಿ, ಪುರಂದರದಾಸರ, ಕನಕದಾಸರ ಆರಾಧನಾ ಮಹೋತ್ಸವ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಸಂಜೀವ್ ಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಆರಾಧನಾ ಮಹೋತ್ಸವ ಸಮಾರಂಭ ನಡೆಯಲಿದ್ದು, ಅಂದು ಬೆಳಿಗ್ಗೆ 9 ಗಂಟೆಗೆ ಹಾಸನಾಂಬ ದೇವಸ್ಥಾನದಿಂದ ಬಿ.ಎಂ. ರಸ್ತೆಯ ಮೂಲಕ ಮಂಗಳವಾದ್ಯಗಳ ತಂಡಗಳೊಂದಿಗೆ ಜ್ಞಾನಾಕ್ಷಿ ಕಲ್ಯಾಣ ಮಂಟಪದವರೆಗೆ ಅಲಂಕೃತ ಬೆಳ್ಳಿ ರಥದಲ್ಲಿ ನಾಗಬ್ರಹ್ಮ ತ್ಯಾಗರಾಜಸ್ವಾಮಿ ಪುರಂದರದಾಸರ , ಕನಕದಾಸರ ಭಾವಚಿತ್ರದೊಂದಿಗೆ ಹಾಗೂ ಸವಿತಾ ಪೀಠದ ಗುರುಗಳಾದ ಸವಿತಾನಂದನಾಥ ಮಹಾ ಸ್ವಾಮೀಜಿ, ಮತ್ತು ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಮಹಾ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ಭವ್ಯ ಮೆರವಣಿಗೆ ಸಾಗಲಿದೆ ಎಂದು ತಿಳಿಸಿದರು.
ವೇದಿಕೆ ಕಾರ್ಯಕ್ರಮ ಮಧ್ಯಾಹ್ನ 12 ಗಂಟೆಗೆ ನಡೆಯಲಿದ್ದು, ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಭವಾನಿ ರೇವಣ್ಣ, ಪ್ರಜ್ವಲ್ ರೇವಣ್ಣ, ಎಚ್ ಡಿ ರೇವಣ್ಣ, ಡಾ.ಸೂರಜ್ ರೇವಣ್ಣ, ರಾಜ್ಯ ಕಲಾ ಸಂಘದ ಸಂಸ್ಥಾಪಕ ಎಂ.ಸಿ. ವೇಣುಗೋಪಾಲ್, ಎಚ್.ಪಿ.ಸ್ವರೂಪ್, ಶಾಸಕರಾದ ಎಚ್.ಕೆ ಕುಮಾರಸ್ವಾಮಿ, ಸಿ.ಎನ್.ಬಾಲಕೃಷ್ಣ, ಎ.ಟಿ.ರಾಮಸ್ವಾಮಿ, ಕೆ.ಎಸ್ .ಲಿಂಗೇಶ್, ಕೆ.ಎಂ.ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಅರ್ಚನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹರಿರಾಮ್ ಶಂಕರವರು ಸೇರಿದಂತೆ ಇತರರು ಆಗಮಿಸಲಿದ್ದಾರೆ ಎಂದು ತಿಳಿಸಿದರು.