ಕೊಣನೂರು: ಅರಕಲಗೂಡು ವಲಯದ ಕೊಣನೂರು ಶಾಖೆ ಗೊಬ್ಬಳಿ ಮೀಸಲು ಅರಣ್ಯದಲ್ಲಿ ಅಕ್ರಮವಾಗಿ ಶ್ರೀಗಂಧದ ಮರಗಳನ್ನು ಕಡಿಯುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ಹೋಬಳಿ ಬಸವೇಶ್ವರ ಕಾಲೋನಿಯ ಸುರೇಶ (27) ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಇನ್ನೋರ್ವ ಆರೋಪಿ ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ಗ್ರಾಮದ ಗುರುನಾಥ ಎಂಬಾತ ಪರಾರಿಯಾಗಿರುತ್ತಾನೆ.
ಅರಕಲಗೂಡು ವಲಯದ ವಲಯ ಅರಣ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಉಪ ವಲಯಾರಣ್ಯಾಧಿಕಾರಿ ಗುರುಸ್ವಾಮಿ, ಗಸ್ತು ಅರಣ್ಯ ಪಾಲಕ ರಾಘವೇಂದ್ರ ಕುಮಾರ್, ಅರಣ್ಯ ಪಾಲಕ ನಾಗೇಶ್, ಅರಣ್ಯ ವೀಕ್ಷಕರಾದ ಬಸವೇಗೌಡ, ಧರ್ಮೇಗೌಡ, ಯು.ಟಿ ಮಂಜುನಾಥ, ಮಂಜರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.