ಹೊಳೆನರಸೀಪುರ: ಟಿಂಬರ್ ಲಾರಿ ಹಿಂಬದಿಯಿಂದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಕುಳಿತಿದ್ದ ಮಹಿಳೆ ಲಾರಿ ಚಕ್ರಕ್ಕೆ ಸಿಲುಕಿ ದಾರುಣವಾಗಿ ಸಾವನಪ್ಪಿರುವ ಘಟನೆ ನಡೆದಿದೆ.
ಅರಕಲಗೂಡು ತಾಲೂಕಿನ ಇಬ್ಬಡಿ ಗ್ರಾಮದ ಶೋಭಾ(25) ಮೃತ ದುರ್ದೈವಿಯಾಗಿದ್ದು, ಪತಿ ನವೀನ್ ಹಾಗೂ ಶೋಭಾ ಹೊ.ನ.ಪುರ ತಾಲೂಕಿನ ಚಿಕ್ಕಪ್ಪನ ಮನೆಗೆ ತೆರಳುತ್ತಿದ್ದು ತಾಲೂಕಿನ ನಾಗಲಾಪುರ ಗೇಟ್ ಬಳಿ ಹಿಂಬದಿಯಿಂದ ಅರಕಲಗೂಡು ಕಡೆಯಿಂದ ಬಂದ ಟಿಂಬರ್ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ರಭಸಕ್ಕೆ ಬೈಕ್‌ನಲ್ಲಿದ್ದ ನವೀನ್ ಹಾಗೂ ಶೋಭಾ ಎಂಬುವವರು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಅಲ್ಲದೆ ಮೃತ ಶೋಭಾರವರು ಲಾರಿಯ ಚಕ್ರಕ್ಕೆ ಸಿಲುಕಿ 150 ಅಡಿ ದೂರದಷ್ಟು ಅವರನ್ನು ಲಾರಿ ಎಳೆದೊಯ್ದಿದ್ದು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಚಾಲನೆ ಮಾಡುತ್ತಿದ್ದ ನವೀನ್‌ರವರಿಗೆ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.