ಚನ್ನರಾಯಪಟ್ಟಣ: ಪಟ್ಟಣದ ಪಿಎಲ್‌ಡಿ ಬ್ಯಾಂಕ್ ನಲ್ಲಿ ೧.೬೫ ಕೋಟಿ ರೂ ಸಾಲ ವಿತರಣೆಯನ್ನು ಮಾಡಲಾಗಿದೆ ಎಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ. ಶಂಕರ ತಿಳಿಸಿದರು. ಚನ್ನರಾಯಪಟ್ಟಣ ತಾಲೂಕಿನ ಕೃಷಿ ಪತ್ತಿನ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಹೊಸ ಸಾಲಗಳ ಚೆಕ್ ವಿತರಣೆ ಸಮಾರಂಭದಲ್ಲಿ ಚೆಕ್ ವಿತರಣೆ ಮಾಡಿ ಮಾತನಾಡಿದ ಅವರು, ಮಾರ್ಚ್ ೩೧ರ ಒಳಗೆ ಬ್ಯಾಂಕಿನ ಸಾಲವನ್ನು ಮರುಪಾವತಿ ಮಾಡಿದರೆ ಬಡ್ಡಿಯನ್ನು ಕಡಿತ ಮಾಡಲಾಗುವುದು. ಕೂಡಲೇ ಸಾಲ ಮರುಪಾವತಿ ಮಾಡಿದ ರೈತರ ಬಡ್ಡಿಯನ್ನು ರಾಜ್ಯ ಪಿಎಲ್‌ಡಿ ಬ್ಯಾಂಕ್ ಹಾಗೂ ತಾಲೂಕಿನ ಬಿಎಲ್‌ಬಿ ಬ್ಯಾಂಕ್ ಭರಿಸಲಿದೆ ಎಂದು ತಿಳಿಸಿದರು.
ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ, ನುಗ್ಗೆಹಳ್ಳಿ, ಬಾಗೂರು, ಶ್ರವಣಬೆಳಗೊಳ ಹೋಬಳಿಯ ಆಯ್ದ ಕೃಷಿಕರಿಗೆ ಬೆಳೆ ಸಾಲ ಮತ್ತು ಟ್ಯಾಕ್ಟರ್ ಸಾಲ ವಿತರಣೆ ಮಾಡಲಾಗುತ್ತದೆ. ಸಾಲ ಪಡೆದಂತಹ ಕೃಷಿಕರು ಸಕಾಲಕ್ಕೆ ಮರುಪಾವತಿ ಮಾಡುವುದು ಒಳಿತು. ಬ್ಯಾಂಕಿನ ಏಳಿಗೆಗಾಗಿ ಸಾಲ ಪಡೆದವರು ಕೃಷಿ ಕಾರ್ಯದಲ್ಲಿ ತಮ್ಮನ ತೊಡಗಿಸಿಕೊಂಡು ಸಾಲವನ್ನು ಮರುಪಾವತಿ ಮಾಡಬೇಕು ಇದರಿಂದ ಇತರ ರೈತರಿಗೂ ಸಾಲ ನೀಡಲು ಅನುಕೂಲವಾಗುತ್ತದೆ ಎಂದರು.
ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಬಿ.ಎಂ.ಆರ್ ಮಂಜುನಾಥ, ಬೊಮ್ಮೇಗೌಡ, ಬ್ಯಾಂಕಿನ ಮಾಜಿ ಅಧ್ಯಕ್ಷ ಜಯರಾಮ್, ಮುಖಂಡರಾದ ಗನ್ನಿ ವಿಶ್ವನಾಥ, ಶ್ರೀಧರ, ಶಿವಣ್ಣ, ಎಂ ಆರ್ ರಂಗಸ್ವಾಮಿ, ಬ್ಯಾಂಕಿನ ವ್ಯವಸ್ಥಾಪಕ ಜಗದೀಶ ಚಂದ್ರ ಸೇರಿದಂತೆ ಇತರರು ಹಾಜರಿದ್ದರು.