ಬೇಲೂರು: ಮೂರು ದಿನಗಳ ಹಿಂದೆ ಕೆರೆಬೀದಿಯ ಬಾಗ್ಯಮ್ಮ ಹಾಗೂ ನಾಗರಾಜು ಅವರ ವಾಸದ ಮನೆಗೆ ಬೆಂಕಿ ಬಿದ್ದು ಎಲ್ಲಾ ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದ್ದವು. ನಂತರ ಆ ಮನೆಯವರು ತಮ್ಮ ಮಗಳ ಮನೆಯಲ್ಲಿ ಸದ್ಯ ವಾಸವಿದ್ದು ಅವರಿಗೆ ವಾಸ ಮಾಡಲು ಇದ್ದಂತ ಮನೆ ಸಂಪೂರ್ಣ ರಿಪೇರಿಯಾಗದ ರೀತಿಯಲ್ಲಿ ಬೆಂಕಿಗೆ ಆಹುತಿಯಾಗಿದ್ದು ಈಗ ಜೀವನ ನಡೆಸಲೂ ತೊಂದರೆಯಾಗಿದೆ.
ಇದನ್ನು ಮನಗಂಡು ಮನೆಯ ಕುಟುಂಬದವರನ್ನು ವಿಚಾರಿಸಲು ಬಂದ ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ, ನೊಂದಿರುವ ಕುಟುಂಬದವರನ್ನು ಸಂತೈಸಿ ನಂತರ ಮಾತನಾಡಿದ ಅವರು ಕೆರೆಬೀದಿಯಲ್ಲಿ ವಾಸವಾಗಿದ್ದ ಭಾಗ್ಯಮ್ಮ ಹಾಗೂ ನಾಗರಾಜ್ ಎಂಬುವರ ಮನೆಯು ಆಕಸ್ಮಿಕ ಬೆಂಕಿ ಕೆನ್ನಾಲಿಗೆಯಿಂದ ಮನೆ ಸಂಪೂರ್ಣ ಭಸ್ಮವಾಗಿದೆ. ಕುಟುಂಬ ನಿರ್ವಹಣೆ ಮಾಡಲು ದುಸ್ಥಿಯಲ್ಲಿರುವ ಇವರಿಗೆ ತಾಲೂಕು ಕಚೇರಿಯಿಂದ ಅರ್ಜಿಕೊಡಲು ಹೇಳಿದ್ದು ಹಾಗೂ ಪುರಸಭೆಯಿಂದ ಹಳೆ ಮನೆ ದುರಸ್ಥಿ ಏನಾದರೂ ಇದೆ ಎಂದು ಪರಿಶೀಲಿಸಿ ಇವರಿಗೊಂದು ಉಳಿಯಲು ವ್ಯವಸ್ಥೆ ಮಾಡಿಕೊಡಬೇಕಿದೆ. ಇವರು ತುಂಬಾ ಬಡತನದಲ್ಲಿ ಇದ್ದು ಮನೆ ಪೂರ್ತಿ ಸಂಪೂರ್ಣ ನಾಶವಾಗಿದೆ.ಈಗ ಅವರು ಮಗಳ ಮನಯಲ್ಲಿ ಇರೋದರಿಂದ ಅವರಿಗೆ ದಿನಸಿ ಪಡಿತರ ನೀಡಲು ಹೇಳಿದೀನಿ, ಕಾಂಗ್ರೆಸ್ ನ ಬಿ ಶಿವರಾಂ ಕೂಡ ಇಲ್ಲಿಗೆ ಬಂದು ಅವರಿಗೆ ಸಹಾಯ ಮಾಡಿದ್ದಾರೆ. ನಾನು ಕೂಡ ಪುರಸಭೆ ವತಿಯಿಂದ ಏನಾದರೂ ಸವಲತ್ತು ಇದ್ದರೆ ಮಾಡಿಕೊಡಲು ಸಿದ್ದನಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ರವೀಶ್ ಬಸವಾಪುರ, ಭಾಗ್ಯಮ್ಮ, ನಾಗರಾಜು ಕಟುಂಬದವರು ಹಾಜರಿದ್ದರು.