ಸಕಲೇಶಪುರ: 15ಕ್ಕೂ ಹೆಚ್ಚು ಕಾಡಾನೆ ದಂಡು ಗೇಟ್ ಮುರಿದು ಕಾಫಿ ತೋಟಕ್ಕೆ ಲಗ್ಗೆ ಇಟ್ಟಿರುವ ಘಟನೆ ನಡೆದಿದೆ. ತಾಲೂಕಿನ ಬೆಳಗೋಡು ಹೋಬಳಿ ಮೂಗಲಿ ಗ್ರಾಮದ ಧೀರಜ್ ಎಂಬುವವರ ಕಾಫಿ ತೋಟದಲ್ಲಿ ಕಾಡಾನೆಗಳಿರುವ ಹಿಂಡು ತೋಟದ ಗೇಟ್ ಮುರಿದು ಹಾಕಿ ತೋಟದಲ್ಲಿ ದಾಂದಲೆ ನಡೆಸಿದೆ. ಕಾಡಾನೆಗಳು ಗೇಟ್ ಮುರಿಯುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವೈರಲ್ ಆಗಿದೆ.
ಕಾಡಾನೆ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ತೋಟದ ಕೆಲಸ ಮಾಡಲು ಸಂಕಷ್ಟ ಎದುರಾಗಿದೆ. ಕಾಡಾನೆಗಳ ದಾಂದಲೆ ತಡೆಯುವಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿರುವುದಾಗಿ ತೋಟದ ಮಾಲೀಕರು, ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.