ಸಕಲೇಶಪುರ: ಆನೆಗಳಿಗೆ ಅಂಕುಶ ಹಾಗೂ ಶಾಶ್ವತ ಪರಿಹಾರಕ್ಕೆ ಪರಿಹಾರ ಹುಡುಕುವುದರಲ್ಲಿ ಸಫಲತೆ ಯಾವಾಗ? ಇತ್ತೀಚಿನ ದಿನಗಳಲ್ಲಿ ಆನೆ ದಾಳಿಗೆ ಮಲ್ನಾಡಿನ ಪ್ರತಿಯೊಬ್ಬ ರೈತನ ನಿದ್ದೆ ಹಾಳು ಮಾಡಿದಂತಾಗಿದೆ. ಹೇಗೆ ತೋಟಕ್ಕೆ ಲಗ್ಗೆ ಇಡುತ್ತದೆ ಎಂದು ತಿಳಿಯಲಾಗುತ್ತಿಲ್ಲ.
ಆನೆಗಳ ಚಲನ ವಲನ ಗಮನಿಸುವುದರಲ್ಲಿ ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದ್ದರೆ ತಪ್ಪಾಗಲಾರದು. ಅದಕ್ಕೆ ಉದಾಹರಣೆ ಎಂಬಂತೆ ಬಾಳಗದ್ದೆ ಸಮೀಪ ಇರುವ ಏಲಕ್ಕಿ ವ್ಯಾಪಾರಿ ರಾಜುರವರ ಕೆಂಪೆ ಅನಾಲ್ ತೋಟದಲ್ಲಿ ಮನೆಯ ಕಣದಲ್ಲಿ ಒಣಗಿಸಲು ಹಾಕಿದ್ದ ಕಾಫಿಯನ್ನು, ನೀರನ್ನು ಒಡೆಯುವ ಮೋಟಾರು, ಪೈಪ್ಗಳು ಮತ್ತು ಅಡಕೆ ಕಾಫಿ ಗಿಡಗಳಿಗೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ಆನೆಗಳು ದಾಳಿ ನಡೆಸಿ ಸುಮಾರು 4 ಲಕ್ಷಕ್ಕೂ ಹೆಚ್ಚು ಹಾನಿಯನ್ನುಂಟು ಮಾಡಿದೆ.
ಕಾಡಾನೆಗಳ ದಾಳಿಯ ಹಿಂದೆ ಶಾಶ್ವತ ಪರಿಹಾರ ಯಾವಾಗ ಎಂದು ಸಾರ್ವಜನಿಕರ ಪ್ರತಿದ್ವನಿಯಾದರೆ ಅಧಿಕಾರಿಗಳ ಮೌನ ಮುಂದುವರೆದಿದೆ.