ಸಕಲೇಶಪುರ: ದೇವಿರ ಗುಡ್ಡಕ್ಕೆ ಅಕಸ್ಮಿಕವಾಗಿ ಬಿದ್ದ ಬೆಂಕಿಯನ್ನು ಅಗ್ನಿಶಾಮಕ ದಳದವರು ನೀಕನಹಳ್ಳಿ ಗ್ರಾಮಸ್ಥರ ನೆರವಿನಿಂದ ನಂದಿಸಿದ್ದಾರೆ. ತಾಲೂಕಿನ ಹಾನುಬಾಳ ಹೋಬಳಿಯ ದೇವಾಲದಕೆರೆ ಗ್ರಾ.ಪಂ ವ್ಯಾಪ್ತಿಯ ನೀಕನಹಳ್ಳಿ ಸಮೀಪದ ದೇವಿರ ಗುಡ್ಡಕ್ಕೆ ಅಕಸ್ಮಿಕವಾಗಿ ಬೆಂಕಿ ಬಿದ್ದು ಸುಮಾರು ೨೦ ಎಕರೆ ಸುಟ್ಟು ಕರಕಲಾಗಿದ್ದು, ಗ್ರಾಮದ ಯುವಕರು ತಮ್ಮ ಜೀವದ ಹಂಗು ತೊರೆದು ತೋರಿದ ಸಮಯಪ್ರಜ್ಞೆಯಿಂದ ಅಕ್ಕಪಕ್ಕದ ತೋಟಗಳಿಗೆ ಬೆಂಕಿ ಹಬ್ಬುವುದು ತಪ್ಪಿದೆ.
ನಂತರ ಸಕಲೇಶಪುರ ಪಟ್ಟಣದಿಂದ ಆಗಮಿಸಿದ ಅಗ್ನಿಶಾಮಕ ದಳದವರು ಗ್ರಾಮಸ್ಥರ ನೆರವಿನಿಂದ ಬೆಂಕಿ ನಂದಿಸಿದ್ದಾರೆ. ಗ್ರಾಮದ ಯುವಕರುಗಳಾದ ರಾಜಶೇಖರ, ಅನಿಲ್ ಸಂಪಗೂಡು, ಚೇತನ್, ಸುರೇಶ, ಪ್ರಸನ್ನ, ವಿಶ್ವನಾಥ ಸೇರಿದಂತೆ ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.