ಹಾಸನ: ನಗರದ ಬೀರನಹಳ್ಳಿ ಕೆರೆ ಬಳಿ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆ ನಡೆಸಲಾಯಿತು. ಸಭೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
ಇದೇ ವೇಳೆ ಒಕ್ಕೂಟದ ರಾಜ್ಯಾಧ್ಯಕ್ಷ ಸಿ.ಇ. ರಂಗಸ್ವಾಮಿ, ಜಿಲ್ಲಾಧ್ಯಕ್ಷ ದಿಲೀಪ್‌ಕುಮಾರ್ ಹೆಚ್.ಎಂ, ಬೀದಿ ಬದಿ ವ್ಯಾಪಾರಿಗಳಾದ ಸಹ್ಯಾದ್ರಿ ಸರ್ಕಲ್ ವಿನೋದ ಕುಮಾರ, ಎಂ.ಜಿ. ರೋಡ್ ಪಾಪಣ್ಣ, ವೆಂಕಟೇಶ, ತಣ್ಣೀರುಹಳ್ಳ ಮಲ್ಲೇಶ, ತನ್ವಿ ತ್ರಿಶ ಸರ್ಕಲ್ ಮನು, ಇತರರು ಇದ್ದರು.