ಜಾವಗಲ್: ಹೋಬಳಿ ಬಂದೂರ ಗ್ರಾಮದ ಧನಂಜಯರ ಅಂಗಡಿಯಲ್ಲಿ ಸೋಲ್ಕೋ ಸೋಲಾರ್ ಅವರು ನಿರ್ಮಾಣ ಮಾಡಿಕೊಟ್ಟಿರುವ ಪ್ರಿಂಟರ್ ಮತ್ತು ಪ್ರೀಜ್ ನ್ನು ಹಾಗೂ ಬಸವಲಿಂಗ ಶೆಟ್ಟಿರರ ಮಣ್ಣಿನ ಮಡಿಕೆ ಮಾಡುವ ಯಂತ್ರವನ್ನು ಇಂಗ್ಲೆಂಡ್ ಮತ್ತು ಅಮೇರಿಕಾದಿಂದ ಬಂದಿದ್ದ ಕ್ಲೈಮೆಟ್ ಕೇರ್ ಸಂಸ್ಥೆಯ ಟುಕರ್ ಮಾರಸನ್, ಇಯನ್ ಡಿಕ್ಸನ್, ಮಾಥ್ಯೂ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಸೋಲ್ಕೋ ಸೋಲಾರ್ ಸೀನಿಯರ್ ಮ್ಯಾನೇಜರ್ ಪ್ರಸಾದ್ ರವರು ಸೋಲ್ಕೋ ಸೋಲಾರ್ ಹಾಸನ ಜಿಲ್ಲೆಯಲ್ಲಿ ಸುಮಾರು 350 ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಅಳವಡಿಸಿದ್ದೇವೆ, ಸ್ವ-ಉದ್ಯೋಗ ಮಾಡುವ ಸುಮಾರು 150 ಕುಟುಂಬಕ್ಕೆ ಸೋಲ್ಕೋ ಸೋಲಾರ್ ಅಳವಡಿಸಿದ್ದೇವೆ, ಗ್ರಾಮೀಣ ಪ್ರದೇಶಗಳ ಜಿಲ್ಲೆಯಲ್ಲಿ ಸುಮಾರು 30,000 ಮನೆಗಳಲ್ಲಿ ಸೋಲ್ಕೋ ಸೋಲಾರ್ ಲೈಟ್ ಗಳು ಇವೆ ಹಾಗೂ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಿಗೆ ಸೋಲಾರ್ ಕಂಪೆನಿ ಸೌಲಭ್ಯ ಕೊಡುವಲ್ಲಿ ನೆರವಾಗಿದೆ ಎಂದು ವಿವರಿಸಿದರು